(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೧೯: ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಪದವಿ ಓದುತ್ತಿದ್ದ ಕೊಡಗಿನ ಸನಾ ಪರ್ವಿನ್ (೧೯) ನೇಣಿಗೆ ಶರಣಾಗಿದ್ದಾಳೆ.

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗದೂರು ನಿವಾಸಿ ಸನಾ ಪರ್ವಿನ್ ಸಾವಿನ ಪ್ರಕರಣಕ್ಕೆ ಸಂಬAಧ ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ಕೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಕೇರಳ ಮೂಲದ ರಿಫಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಆಕೆ ನೆಲೆಸಿದ್ದ ಪಿಜಿಯಲ್ಲಿ ನೇಣಿಗೆ ಶರಣಾಗಿ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸನಾ ಪರ್ವಿನ್ ತನ್ನ ಪಿಯುಸಿ ವ್ಯಾಸಾಂಗವನ್ನು ಸುಂಟಿಕೊಪ್ಪ ಸಂತ ಮೇರಿ ಕಾಲೇಜಿನಲ್ಲಿ ಪೂರ್ಣಗೊಳಿಸಿ ಬಳಿಕ, ಬೆಂಗಳೂರಿನ ಕಾಡುಸೊಣ್ಣಪ್ಪಹಳ್ಳಿಯ ಕೋಶಿಯಸ್ ವಿದ್ಯಾಸಂಸ್ಥೆಯಲ್ಲಿ ಬಿಬಿಎ ಏವಿಯೇಷನ್‌ಗೆ ಸೇರ್ಪಡೆಯಾಗಿದ್ದಳು.

ಎಲ್ಲವೂ ಅಂದುಕೊAಡAತೆ ಆಗಿದ್ದರೆ ಏವಿಯೇಷನ್ ಪದವಿ ಮುಗಿಸಿ ಸನಾ ಪರ್ವಿನ್ ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿತ್ತು. ವಿಮಾನದಂತೆ ಹಾರುವ ಕನಸು ಹುಚ್ಚು ಪ್ರೇಮಿಯಿಂದಾಗಿ ನುಚ್ಚು ನೂರಾಗಿದೆ.

ಅದೇ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕೇರಳ ಮೂಲದ ರಿಫಾಸ್‌ನೊಂದಿಗೆ ಸನಾಗೆ ಪ್ರೇಮಾಂಕುರವಾಗಿತ್ತು. ಈ ಮಧ್ಯೆ ರಿಫಾಸ್‌ನ ವರ್ತನೆ ಬದಲಾಗತೊಡಗಿತು. ಸನಾ ಪರ್ವಿನ್ ತನ್ನ ತರಗತಿಯ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದುದಕ್ಕೆ ರಿಫಾಸ್, ಸನಾ ಜೊತೆ ಜಗಳವಾಡುತ್ತಿದ್ದ. ಅದಲ್ಲದೇ ಯಾವ ಹುಡುಗರೊಂದಿಗೂ ಮಾತನಾಡಬಾರದು, ಕಾಲೇಜಿನ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ರಿಫಾಸ್ ತಾಕೀತು ಮಾಡತೊಡಗಿದ ಎಂದು ತಿಳಿದು ಬಂದಿದೆ. ಸನಾ ಪರ್ವಿನ್ ಪ್ರತಿಭಾವಂತೆ. ಪಠ್ಯೇತರ ಚಟುವಟಿಕೆಯಲ್ಲೂ ಮುಂದು. ಗಾಯನದಲ್ಲಿ ೪ಐದÀನೇ ಪುಟಕ್ಕೆ ಆಸಕ್ತಿಯಿತ್ತು. ಅವರು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಳು. ಆದರೆ ರಿಫಾಸ್ ಆಕೆಯನ್ನು ವೇದಿಕೆ ಏರಲೂ ಕೂಡ ಬಿಡದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಷ್ಟರ ಮಟ್ಟಿಗೆ ಆತನ ಕಿರುಕುಳ ಮುಂದುವರೆದಿತ್ತು.

ಕಾಲೇಜಿನಲ್ಲಿ ನಿರಂತರವಾಗಿ ಸನಾಗೆ, ರಿಫಾಸ್ ಕಿರುಕುಳ ನೀಡುತ್ತಿದ್ದ ಎಂದು ಅವರ ಗೆಳತಿಯರು, ಕಾಲೇಜು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊAಡಿದ್ದಾರೆ. ರಿಫಾಸ್ ಕಾಲೇಜಿನಿಂದ ತೇರ್ಗಡೆಯಾದ ನಂತರವೂ, ಕಾಲೇಜು ಮತ್ತು ಸನಾ ಪರ್ವಿನ್ ನೆಲೆಸಿದ್ದ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿಜಿಗೆ ಬಂದು ಅವಳಿಗೆ ಕಿರುಕುಳ ನೀಡುತ್ತಿದ್ದ ಎಂದು ಸನಾರ ಆಪ್ತ ವಲಯ ತಿಳಿಸಿದೆ.

ಸನಾ ತನ್ನ ತರಗತಿಯ ಹುಡುಗರೊಂದಿಗೂ ಮಾತನಾಡಬಾರದು ಎಂದು ಪದೇ ಪದೇ ರಿಫಾಸ್ ಆಕೆಗೆ ಬೆದರಿಕೆ ಹಾಕುತ್ತಿದ್ದನು ಎನ್ನಲಾಗಿದೆ. ಸನಾರೊಂದಿಗೆ ಯಾರಾದರೂ ಹುಡುಗರು ಮಾತನಾಡಿದರೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಸಂಬAಧಿಸಿದ ವೀಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಿಜಿಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಯತ್ನ!:

ರಿಫಾಸ್‌ನೊಂದಿಗೆ ಪ್ರೀತಿಯ ಸಂಬAಧವನ್ನು ಕೊನೆಗೊಳಿಸಲು ಹಲವು ಬಾರಿ ಸನಾ ಪರ್ವಿನ್ ಪ್ರಯತ್ನಿಸಿದ್ದಳು. ಆದರೆ ರಿಫಾಸ್ ಆಕೆಯನ್ನು ಬೆದರಿಸುತ್ತಿದ್ದ ಎಂದು ಸನಾ ಅವರ ಆಪ್ತ ವಲಯ ಹೇಳುತ್ತದೆ.

ಅದಲ್ಲದೇ ಈ ಹಿಂದೆ ರಿಫಾಸ್‌ನ ಕಿರುಕುಳ ತಾಳಲಾರದೆ ಸನಾ ಪರ್ವಿನ್ ಪಿಜಿಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಪ್ರಯತ್ನ ನಡೆಸಿದ್ದಳು. ಕೈಗೆ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ವಿದ್ಯಾರ್ಥಿಗಳು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೇ ರಿಫಾಸ್ ಸನಾರಿಂದ ಚಿನ್ನವನ್ನು ಕೂಡ ಪಡೆದುಕೊಂಡಿದ್ದ, ರಿಫಾಸ್ ವಿರುದ್ಧ ಸನಾ ಪರ್ವಿನ್ ತಂದೆ ಅಬ್ದುಲ್ ನಝೀರ್ ದೂರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.