ಸುಂಟಿಕೊಪ್ಪ, ಅ. ೧೮ : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳು ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಸುಂಟಿಕೊಪ್ಪ ಹೋಬಳಿಯ ಅಂದಗೋವೆ ಗ್ರಾಮದಲ್ಲಿ ಧರ್ಮರಾಜ್ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಹೆಚ್.ಆರ್. ಅಣ್ಣಪ್ಪ ಅವರ ಪತ್ನಿ ಲಕ್ಷಿö್ಮ ವೈ.ಸಿ. ಮತ್ತು ಮಗಳು ಅನುಶ್ರೀ ತಾ. ೧೨ ರಿಂದ ನಾಪತ್ತೆಯಾಗಿದ್ದಾರೆಂದು ಪತಿ ಅಣ್ಣಪ್ಪ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಹಿಳೆ ಮತ್ತು ಮಗು ಕಂಡುಬAದಲ್ಲಿ ಸುಂಟಿಕೊಪ್ಪ ಠಾಣೆ ಮೊಬೈಲ್ ೯೪೮೦೮೦೪೯೫೩, ದೂ.೦೮೨೭೬-೨೬೩೩೩, ಸೂಚಿಸುವಂತೆ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.