ಮಡಿಕೇರಿ, ಅ. ೧೮: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರೆಜಿತ್ ಕುಮಾರ್ ಗುಹ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್. ಮುಸ್ತಫ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೨೦೨೫-೨೮ನೇ ಸಾಲಿನ ಆಡಳಿತ ಮಂಡಳಿಗೆ ವೀರಾಜಪೇಟೆ ಪ್ರೆಸ್ಕ್ಲಬ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಪುತ್ತಂ ಪ್ರದೀಪ್, ಖಜಾಂಚಿಯಾಗಿ ಹೇಮಂತ್ ಕುಮಾರ್ ಎಂ.ಎನ್., ನಿರ್ದೇಶಕರಾಗಿ ಕಿಶೋರ್ ಕುಮಾರ್ ಶೆಟ್ಟಿ, ಕೋಲತಂಡ ರಘು ಮಾಚಯ್ಯ ಆಯ್ಕೆಯಾದರು.
ಈ ಸಂದರ್ಭ ಮಾತನಾಡಿದ ರೆಜಿತ್, ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಜಿಮ್ಮಿ ಸಿಕ್ವೇರಾ, ಜಿಲ್ಲಾ ವೀಕ್ಷಕರಾದ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ನಾಗರಾಜ್ ಶೆಟ್ಟಿ, ಪಾರ್ಥ ಚಿಣ್ಣಪ್ಪ, ಡಿ. ಮಂಜುನಾಥ್, ಕಾಂಗಿರ ಬೋಪಣ್ಣ, ತೇಜಸ್ ಪಾಪಯ್ಯ, ಇಸ್ಮಾಯಿಲ್ ಕಂಡಕರೆ, ಎ.ಎನ್. ವಾಸು, ನೌಫಲ್ ಕಡಂಗ, ಕೃಷ್ಣ, ಅಂತೋಣಿ ಹಾಜರಿದ್ದರು.