ಚೆಟ್ಟಳ್ಳಿ, ಅ. ೧೮ : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾವೇರಿ ತೀರ್ಥ ಪೂಜೆ ಹಾಗೂ ವಿತರಣೆ ನೆರವೇರಿತು.

ಸಹಕಾರ ಸಂಘದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಅರ್ಚಕರಾದ ಯೋಗೇಶ್ ಭಟ್ ವಿಶೇಷ ಹೂವಿನ ಅಲಂಕಾರದೊAದಿಗೆ ಪೂಜೆ ಹಾಗು ತೀರ್ಥವನ್ನು ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಪ್ರತಿ ವರ್ಷ ಪುಣ್ಯ ತೀರ್ಥೋದ್ಬವದಂದು ಪವಿತ್ರ ತೀರ್ಥವನ್ನು ತಂದು ಚೆಟ್ಟಳ್ಳಿಯಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂÀzರು. ಮಹಾಮಂಗಳಾರತಿಯ ನಂತರ ತೀರ್ಥ ಹಾÀUÆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ಹಾಜರಿದ್ದರು.ಚೆಯ್ಯಂಡಾಣೆ : ಮಲ್ಮ ಯುವಕ ಸಂಘ ಕಕ್ಕಬ್ಬೆ ವತಿಯಿಂದ ೧೯ನೇ ವರ್ಷದ ತೀರ್ಥ ವಿತರಣೆ ಚೆಯ್ಯಂಡಾಣೆ ಪಟ್ಟಣದಲ್ಲಿ ಜರುಗಿತು. ಕಕ್ಕಬ್ಬೆ, ಮರಂದೋಡ ಮಾರ್ಗವಾಗಿ ಚೆಯ್ಯಂಡಾಣೆ ಪಟ್ಟಣದಲ್ಲಿ ತೀರ್ಥ ವಿತರಿಸಿ ನಂತರ ಕರಡದವರೆಗೆ ವಿತರಿಸಲಾಯಿತು.ಪೊನ್ನಂಪೇಟೆ : ಕೊಡವ ಹಿತರಕ್ಷಣಾ ಬಳಗ ಪೊನ್ನಂಪೇಟೆ - ಕಿಗ್ಗಟ್‌ನಾಡ್ ಇವರು ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಣೆ ಮಾಡಿದರು.