ಮಡಿಕೇರಿ, ಅ. ೧೭: ಮಹರ್ಷಿ ವಾಲ್ಮೀಕಿ ಆದಿವಾಸ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರ ಸಮಸ್ಯೆಗಳ ಕುರಿತು ವಿಧಾನ ಸೌಧ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸಭೆ ನಡೆಸಿದರು. ಪರಿಶಿಷ್ಟ ವರ್ಗಗಳ ಅಧೀನದಲ್ಲಿ ಇರುವ ಮಹರ್ಷಿ ವಾಲ್ಮೀಕಿ ಆದಿವಾಸ ಬುಡಕಟ್ಟು ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸಕ್ರಮಗೊಳಿಸುವುದು. ಅರ್ಜಿ ಸಮಿತಿಯ ತೀರ್ಮಾನದಂತೆ ನೇರ ನೇಮಕಾತಿ/ ಸೇವಾ ಭದ್ರತೆ ಒದಗಿಸುವುದು ಹಾಗೂ ಖಿ.ಇ.ಖಿ ಯಿಂದ ವಿನಾಯಿತಿ ಒದಗಿಸುವುದು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಂಶುಪಾಲರ ಮತ್ತು ಶಿಕ್ಷಕರ ಸೇವೆಯನ್ನು ವಿಲೀನ ಗೊಳಿಸಿರುವ ರೀತಿ ಇವರನ್ನು ಸಹ ವಿಲೀನ ಗೊಳಿಸುವುದು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಘ ರಚನೆಯಾಗಿರುವಂತೆ ರಾಜ್ಯದ ೧೧೯ ವಾಲ್ಮೀಕಿ ಆಶ್ರಮ ಶಾಲೆಗಳಿಗೆ ಸಂಘ ರಚಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ವರ್ಷ ಮೇಲ್ಪಟ್ಟು ದುಡಿಯುತ್ತಿರುವ ಶಿಕ್ಷಕರನ್ನು ಸಂಘದಲ್ಲಿ ವಿಲೀನ ಮಾಡಿ ಸಕ್ರಮಾತಿ/ ಸೇವಾ ಭದ್ರತೆ ಒದಗಿ¸ಕಡಂಗ, ಅ. ೧೭: ಮತ ಲೌಕಿಕ ಸಮನ್ವಯ ಸಂಸ್ಥೆ ಕಾಸರಗೋಡು ಜಾಮಿಅ ಸಅದಿಯಾ ಸಮ್ಮೇಳನ ತಾ.೨೦, ೨೧ ರಂದು ಸಂಸ್ಥೆಯ ಕ್ಯಾಂಪಸ್‌ನಲ್ಲಿ ಜಾಗತ್ತಿಕ ನಾಯಕರ ಉಪಸ್ಥಿತಿಯಲ್ಲಿ ನಡೆಯಲಿದೆ.

ಆ ಪ್ರಯುಕ್ತ ಸಂಸ್ಥೆಯ ರೂವಾರಿಗಳಾದ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್, ಶೈಖುನಾ ನೂರುಲ್ ಉಲಮಾ ಎಂಎ, ಉಸ್ತಾದರ ಸಂಸ್ಮರಣೆ ಮತ್ತು ಜಿಲ್ಲಾ ಸಅದಿ ಸಂಗಮವನ್ನು ಕಡಂಗದ ಬದ್ರಿಯಾ ಸಂಸ್ಥೆಯಲ್ಲಿ ನಡೆಸಲಾಯಿತು. ಪ್ರಾರ್ಥನೆಯನ್ನು ಕಡಂಗ ಬದ್ರಿಯಾ ಮಸೀದಿಯ ಮುದರ್ರಿಸ್ ಸ್ವಾದಿಕ್ ಸುರೈಜಿ ಸಖಾಫಿ ನಿರ್ವಹಿಸಿದರು.

ಮಜ್ಲಿಸ್ ಉಲಮಾಇ ಸ್ಸಅದಿಯ್ಯೀನ್ ಜಿಲ್ಲಾಧ್ಯಕ್ಷರಾದ ಹಂಝ ಸಅದಿ ಹುಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಉದ್ಘಾಟನೆಯನ್ನು ಕೂರ್ಗ್ ಜಂಇಯ್ಯತ್ತುಲ್ ಉಲಮಾ ಮುಶಾವರ ಸದಸ್ಯರಾದ ಅಬ್ದುಲ್ ರಶೀದ್ ಸಅದಿ ಅಯ್ಯಂಗೇರಿ ನೆರವೇರಿಸಿದರು. ಪ್ರಾಸ್ತಾವಿಕ ಭಾಷಣವನ್ನು ಅಬ್ದುಲ್ ರಝಾಕ್ ಸಅದಿ ಚಾಮಿಯಾಲ್ ಮತ್ತು ರಫೀಕ್ ಸಅದಿ ಏಳನೇ ಹೊಸಕೋಟೆ ನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಅಬ್ದುಲ್ ಲತೀಫ್ ಸಅದಿ ಕೊಟ್ಟಿಲ ಮತ್ತು ಕೇಂದ್ರ ಸಮಿತಿ ಸಾರಥಿ ಇಸ್ಮಾಯಿಲ್ ಸಅದಿ ಪಾರಪಳ್ಳಿ ಅವರು ತರಗತಿ ನಡೆಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ಸಅದಿ ಪಾಲಿಬೆಟ್ಟ ವಾರ್ಷಿಕ ವರದಿ ವಾಚಿಸಿದರು ಹಾಗೂ ಲೆಕ್ಕ ಪತ್ರ ಮಂಡಿಸಿದರು.

ತದನಂತರ ಕೇಂದ್ರ ವೀಕ್ಷಕರ ಮುಂದಾಳತ್ವದಲ್ಲಿ ಕೊಡಗು ಜಿಲ್ಲಾ ಸಅದಿ ಒಕ್ಕೂಟದ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ೨೦೨೫-೨೭ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಷಂಶುದ್ದೀನ್ ಸಅದಿ ಪಡಿಯಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಅದಿ ಎಡಪಾಲ, ಫೈನಾನ್ಸ್ ಸೆಕ್ರೆಟರಿಯಾಗಿ ಅಬ್ದುಲ್ ರಝಾಕ್ ಸಅದಿ ಗದ್ದೇಹಳ್ಳ, ಸಾಂತ್ವನ ನಿಧಿ ವಿಭಾಗದ ಉಪಾಧ್ಯಕ್ಷರಾಗಿ ರಝಾಕ್ ಸಅದಿ ಚಾಮಿಯಾಲ, ಸಾಂತ್ವನ ನಿಧಿ ಕಾರ್ಯದರ್ಶಿಗಳಾಗಿ ರಫೀಕ್ ಸಅದಿ ಪಾಲಿಬೆಟ್ಟ, ಸಅದಿಯ್ಯಾ ನಿಧಿ ಉಪಾಧ್ಯಕ್ಷರಾಗಿ ರಫೀಕ್ ಸಅದಿ ಏಳನೇ ಹೊಸಕೋಟೆ, ಸಅದಿಯ್ಯಾ ನಿಧಿ ಕಾರ್ಯದರ್ಶಿಗಳಾಗಿ ಮುನೀರ್ ಸಅದಿ ಎಮ್ಮೆಮಾಡು, ಸಂಘಟನೆ ವಿಭಾಗದ ಉಪಾಧ್ಯಕ್ಷರಾಗಿ ಹಂಝ ಸಅದಿ ಹುಂಡಿ, ಸಂಘಟನೆ ವಿಭಾಗದ ಕಾರ್ಯದರ್ಶಿಗಳಾಗಿ ಝುಬೈರ್ ಸಅದಿ ಮಾಲ್ದಾರೆಯನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿಣಿ ಸದಸ್ಯರಾಗಿ ಮುಹಮ್ಮದ್ ನಿಝಾರ್ ಸಖಾಫಿ ಅಫ್ಳಲ್ ಸಅದಿ ಕಡಂಗ, ಹಸೈನಾರ್ ಸಅದಿ ಕಾಮಿಲ್ ಸಖಾಫಿ ಅಯ್ಯಂಗೇರಿ, ಮಹ್ಮೂದ್ ಸಅದಿ ಕೊಂಡAಗೇರಿ, ಹೈದರಲಿ ಸಅದಿ ಏಳನೇ ಹೊಸಕೋಟೆ, ಅಬ್ದುಲ್ ಲತೀಫ್ ಸಅದಿ ಕಂಬಿಬಾಣಿ, ಇಬ್ರಾಹೀಂ ಸಅದಿ ಎಮ್ಮೆಮಾಡು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸ್ವಾಗತ ಹಾಗೂ ವಂದನೆಯನ್ನು ನಿಕಟಪೂರ್ವ ಮತ್ತು ನೂತನ ಕಾರ್ಯದರ್ಶಿಗಳು ನಿರ್ವಹಿಸಿದರು.

ÀÄವುದು. ಮಾನ್ಯ ಉಚ್ಚನ್ಯಾಯಾಲಯದ ಆದೇಶದಂತೆ ಕರ್ನಾಟಕ ವಸತಿ ಶಿಕ್ಷಣದ ಅಧೀನದಲ್ಲಿರುವ ಹೊರ ಸಂಪನ್ಮೂಲ ಭೋದಕ ಹಾಗೂ ಭೋದಕೇತರ ಸೇವಾ ಸಕ್ರಮಾತಿಯಂತೆ ನಮ್ಮನ್ನು ಪರಿಗಣಿಸುವ ಕುರಿತು ಬುಡಕಟ್ಟು ವಸತಿ ಶಾಲೆಯ ಶಿಕ್ಷಕರು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಪೊನ್ನಣ್ಣ ಅವರು ಶಿಕ್ಷಕರ ಮನವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಕ್ರಮಗೊಳಿಸುವ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಈ ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಂದೀಪ್, ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.