ಗೋಣಿಕೊಪ್ಪ ವರದಿ, ಅ. ೧೭ ; ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಹ್ಯಾಕ್‌ನೋವ ರಾಷ್ಟçಮಟ್ಟದ ಕಾರ್ಯಕ್ರಮ ಥಿಂಕ್ ಫಾಸ್ಟ್, ಬಿಲ್ಡ್ ಫಾಸ್ಟರ್, ಇನೊವೇಟ್ ಫಾಸ್ಟರ್ ಎಂಬ ಘೋಷಾವಾಕ್ಯದಲ್ಲಿ ನಡೆಯಿತು.
ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿರಿಯಪಂಡ ರಾಕೇಶ್ ಪೂವಯ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹ್ಯಾಕಥಾನ್ ಸ್ಪರ್ಧೆ ಹೆಚ್ಚು ಕುತೂಹಲ ನೀಡಿದೆ. ಕಿರಿಯರಲ್ಲಿರುವ ಸಾಮರ್ಥ್ಯ ಹೊರಬರಲಿ ಎಂಬ ಉದ್ದೇಶ ಈಡೇರಲಿದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮಾತನಾಡಿ, ಯುವ ಸಮುದಾಯಕ್ಕೆ ಇಂದು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಂತ್ರಜ್ಞಾನದ ನೆರವು ನೀಡಲು ಇಂತಹ ಕಾರ್ಯಕ್ರಮ ಪ್ರಯೋಜನಕಾರಿ. ಈ ನಿಟ್ಟಿನಲ್ಲಿ ಹೊಸತನದ ಚಿಂತನೆಯನ್ನು ಹೊರಹಾಕಬೇಕಿದೆ ಎಂದರು. ಸಮಾಜದ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಹ್ಯಾಕಥಾನ್ ಮೂಲವಾಗಲಿ ಎಂದರು.
ಕAಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಕೆ. ಕೆ. ಡೈನಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ರಾಷ್ಟçಮಟ್ಟದ ಹ್ಯಾಕ್‌ನೋವ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು ೧೨೦ ತಂಡಗಳು ಹೆಸರು ನೋಂದಾಯಿಸಿಕೊAಡಿತ್ತು. ಕೊನೆಯದಾಗಿ ೩೦ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಕೇರಳ ರಾಜ್ಯದಿಂದ ಹೆಚ್ಚು ತಂಡಗಳು ಭಾಗವಹಿಸಿವೆ ಎಂದರು.
ಮೈಸೂರು ಜೆಎಸ್‌ಎಸ್‌ಎಸ್‌ಟಿಯು ಕಾಲೇಜಿನ ಐಎಸ್‌ಇ ವಿಭಾಗ ಮುಖ್ಯಸ್ಥ ಡಾ. ಎಸ್. ಪಿ. ಶಿವ ಪ್ರಕಾಶ್, ಮೈಸೂರು ಎನ್‌ಐಇ ಕಾಲೇಜು ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಮುಖ್ಯಸ್ಥ ಡಾ. ಸಂಜಯ್, ಜಸ್ಟ್ ರೊಬೊಟಿಕ್ಸ್ ಸಿಇಒ ಬ್ರಿಜೇಶ್, ಹ್ಯಾಕ್‌ನೋವ ಕಾರ್ಯಕ್ರಮ ಸಂಚಾಲಕಿ ಕೆ. ಎಂ. ಕೀರ್ತನ, ವಿದ್ಯಾರ್ಥಿಗಳಾದ ಟೆಕ್‌ನೋವಾ ಅಧ್ಯಕ್ಷ ಎಂ. ಜಿ. ತೀರ್ಥ, ಕಾರ್ಯದರ್ಶಿ ಕೆ. ಕೆ. ಪ್ರಜು, ತಾಂತ್ರಿಕ ಮುಖ್ಯಸ್ಥ ಬಿ. ಎಸ್. ಮದನ್‌ಗೌಡ ಇದ್ದರು.