ಮಡಿಕೇರಿ, ಅ. ೧೭: ಮಲೇಶಿಯದ ಕೌಲಾಲಂಪುರ್ನಲ್ಲಿ ಇತ್ತೀಚೆಗೆ ನಡೆದ ವರ್ಲ್ಡ್ ಸ್ಕಾಲರ್ ಕಪ್, ಇಂಗ್ಲೀಷ್ ಭಾಷಣ, ಕ್ವಿಜ್, ರೈಟಿಂಗ್, ಸೈನ್ಸ್ ರ್ಟ್÷್ಸ ಟೀಮ್ ವರ್ಕ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ಹಲವಾರು ದೇಶಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಕೊಡಗಿನ ಬೆಳ್ಳುಮಾಡು ಗ್ರಾಮದ ಮಾತಂಡ ವೃಷಾಂಕ್ ಬೆಳ್ಯಪ್ಪ ೨ ಚಿನ್ನ, ೩ ಬೆಳ್ಳಿ ಇತರ ಪದಕಗಳು ಒಟ್ಟು ೧೧ ಪದಕಗಳನ್ನು ಗಳಿಸಿ ಸಾಧನೆ ತೋರಿದ್ದಾನೆ. ಈ ಮೂಲಕ ಅಮೇರಿಕಾದ ನ್ಯೂ ಹೆವನ್ ಕನೆಕ್ಟಿಕಟ್ನ ಯಾಲೆ ವಿಶ್ವವಿದ್ಯಾಲಯದಲ್ಲಿ ನವೆಂಬರ್ ೪-೧೨ ರವರೆಗೆ ನಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ವೃಷಾಂಕ್ ಅರ್ಹತೆ ಪಡೆದಿದ್ದಾರೆ. ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯ ೭ನೇ ತರಗತಿಯ ವಿದ್ಯಾರ್ಥಿಯಾಗಿರುವ ವೃಷಾಂಕ್ ಬೆಳ್ಯಪ್ಪ ತಾಯಿ ಮಾತಂಡ ಅಂಬಿಕಾ ಬೋಪಣ್ಣ, ಅಸಿಸ್ಟೆಂಟ್ ಪ್ರೊಫೇಸರ್ ಬಿ.ಎಂ.ಎಸ್. ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು ಇವರು ಕೂಡ ಕೇಂಬ್ರಿಡ್ಜ್ ಹರ್ವೆರ್ಡ್ ಮತ್ತು ಮಸಾಚ್ಯುಸೆಟ್ಸ್ ವಿಶ್ವವಿದ್ಯಾಲಯಕ್ಕೆ ವಿಶೇಷ ಅಧ್ಯಯನಕ್ಕೆ ಭೇಟಿ ಸಲುವಾಗಿ ಜೊತೆಯಲ್ಲಿ ತೆರಳಿದ್ದಾರೆ.