ಗುಡ್ಡೆಹೊಸೂರು, ಅ. ೧೭: ಇಲ್ಲಿನ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಶ್ರೀ ಚೌಡೇಶ್ವರಿ ದೇವಸ್ಥಾನದ ಜಾಗದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಭೇಟಿ ನೀಡಿದ ಶಾಸಕ ಡಾ. ಮಂತರ್ ಗೌಡ, ಮುಂಭಾಗದಲ್ಲಿ ಚಾವಡಿಯನ್ನು ನಿರ್ಮಿಸಲು ಶಾಸಕರ ನಿಧಿಯಿಂದ ರೂ. ೧೦ ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದರು.
ದೇವಸ್ಥಾನ ರಸ್ತೆಗೆ ರೂ. ೫ ಲಕ್ಷ ಹಣದಲ್ಲಿ ರಸ್ತೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜನ, ಉಪಾಧ್ಯಕ್ಷ ಕಳಂಜನ ದಾದಪ್ಪ, ಕಾರ್ಯದರ್ಶಿ ಸಂತೋಷ್ ಬಿ.ಎಂ, ಸದಸ್ಯರಾದ ವಿಶು ಕುಮಾರ್, ಪಾಪಣ್ಣ, ನಿತ್ಯಾನಂದ ಕುಡೆಕ್ಕಲ್, ಪ್ರಸನ್ನ ಬಿ.ಟಿ. ವಿಜಯ, ಎನ್.ಜಿ. ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್, ಸದಸ್ಯರಾದ ಕುಡೆಕ್ಕಲ್ ಸುಶೀಲ, ನಾರಾಯಣ ಪಿ.ಡಿ.ಓ. ಸುಮೇಶ್ ಮುಂತಾದವರು ಹಾಜರಿದ್ದರು.