ಮಡಿಕೇರಿ, ಅ. ೧೬: ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ತಾ.೨೧ರಂದು ದೀಪಾವಳಿ ದೀಪೋತ್ಸವ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ ೭ ಗಂಟೆಗೆ ಕಳಸ ಪೂಜೆ, ೮ ಗಂಟೆಗೆ ಅನ್ನದಾನ ಪ್ರಸಾದ ವಿನಿಯೋಗ, ೯ ಗಂಟೆಗೆ ತಾಯಿ ದರ್ಶನ, ರಾತ್ರಿ ೯.೩೦ ಗಂಟೆಗೆ ದೀಪೋತ್ಸವ ಆರಂಭವಾಗಲಿದ್ದು, ನಂತರ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ದೇವಾಲಯದ ಆವರಣದಲ್ಲಿ ೧೦೮ ಎಳ್ಳು ಬತ್ತಿಯನ್ನು ಹಚ್ಚಿದರೆ ಗ್ರಹದೋಷ, ಸಂಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದು ಗೋವಿಂದಸ್ವಾಮಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ದೇವಾಲಯ ಟ್ರಸ್ಟಿಗಳಾದ ಕಿರಣ್‌ಕುಮಾರ್ (ಪಪ್ಪಿ), ಸಚಿನ್ ವಾಸುದೇವ್, ಭಕ್ತರಾದ ಚುಮ್ಮಿ ದೇವಯ್ಯ, ಸೂದನ ಹರೀಶ್ ಉಪಸ್ಥಿತರಿದ್ದರು.