ಸೋಮವಾರಪೇಟೆ, ಅ. ೧೬: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ಕೃಷಿಕ ನಾಣಿಯಪ್ಪ ಅವರು ಬೆಳೆದಿದ್ದ ಕಾಫಿ ಹಾಗೂ ಏಲಕ್ಕಿ ಗಿಡಗಳನ್ನು ಕಡಿದು ನಾಶಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯಿಂದ ಸ್ಥಳದ ಸರ್ವೆ ಕಾರ್ಯ ನಡೆಸಲಾಗಿದ್ದು, ನಿಗದಿಪಡಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಮುಕ್ಕೋಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರು ಬೆಳೆದಿದ್ದ ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಸಂತ್ರಸ್ಥ ಕೃಷಿಕನಿಗೆ ಪರಿಹಾರ ಒದಗಿಸುವ ಸಂಬAಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕಳೆದ ತಾ. ೨೬.೦೯.೨೦೨೫ರಂದು ಮಡಿಕೇರಿ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಲಾಗಿತ್ತು.

ಪ್ರತಿಭಟನೆ ಸಂದರ್ಭ ರೈತರ ಬೇಡಿಕೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಕಾರಾತ್ಮಕಾಗಿ ಸ್ಪಂದಿಸಿ, ಮುಂದಿನ ೭ ದಿನಗಳ ಒಳಗೆ ಕ್ರಮ ವಹಿಸುವ ಭರವಸೆ ನೀಡಿದ್ದರು. ಇದಾಗಿ ೧೫ ದಿನ ಕಳೆದರೂ ಯಾವುದೇ ಪೂರಕ ಕ್ರಮಗಳು ಆಗಿರಲಿಲ್ಲ.

ಆದ್ದರಿಂದ ಮತ್ತೊಮ್ಮೆ ಅರಣ್ಯ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಸೇರಿದಂತೆ ಪದಾಧಿಕಾರಿಗಳು ತಾ. ೧೦ ರಂದು ಮತ್ತೊಮ್ಮೆ ಮನವಿ ಸಲ್ಲಿಸಿ ಎಚ್ಚರಿಸಿದ್ದರು.

ರೈತ ಹೋರಾಟ ಸಮಿತಿಯ ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ನಿನ್ನೆ ದಿನ ಮುಕ್ಕೋಡ್ಲು ಗ್ರಾಮಕ್ಕೆ ತೆರಳಿ ನಾಣಿಯಪ್ಪ ಅವರು ಕೃಷಿ ಮಾಡಿಕೊಂಡಿದ್ದ ಜಾಗದ ಸರ್ವೆ ಕಾರ್ಯ ನಡೆಸಿದೆ. ಮಡಿಕೇರಿ ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಾಲೂಕು ಕಚೇರಿ ಸಿಬ್ಬಂದಿಗಳು, ಸರ್ವೆಯರ್‌ಗಳು, ಮಡಿಕೇರಿ ವಲಯ ಅರಣ್ಯಾಧಿಕಾರಿ, ಸರ್ವೆ ಘಟಕದ ಮೋಜಣಿದಾರರು ಹಾಗೂ ಅರ್ಜಿದಾರ ನಾಣಿಯಪ್ಪ ಸೇರಿದಂತೆ ಸ್ಥಳೀಯರ ಸಮಕ್ಷಮ ಜಾಗದ ಸರ್ವೆ ನಡೆಸಲಾಗಿದೆ. ಸರ್ವೆ ವರದಿಯನ್ನು ಸಂಬAಧಿಸಿದ ಇಲಾಖೆಗೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಆರಂಭಿಕ ಹಂತವಾಗಿ ಅರಣ್ಯ ಇಲಾಖೆ ಜಾಗದ ಸರ್ವೆ ನಡೆಸಿದ್ದು, ಹೀಗಾಗಿ ನಿಗದಿಪಡಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಏಕಾಏಕಿ ಜಾಗಕ್ಕೆ ನುಗ್ಗಿ ಕಾಫಿ ಮತ್ತು ಏಲಕ್ಕಿ ಬೆಳೆಯನ್ನು ನಾಶಪಡಿಸಿದ್ದಾರೆ.

ನಾಣಿಯಪ್ಪ ಅವರು ಸರ್ಕಾರದ ವಿವಿಧ ನಮೂನೆಗಳಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದರೂ ಇದನ್ನು ಪರಿಗಣಿಸದೇ, ಅರಣ್ಯ ಇಲಾಖೆಯ ಜಾಗವೆಂದು ತಪ್ಪು ಕಲ್ಪನೆಯಿಂದ ಗಿಡಗಳನ್ನು ನಾಶಪಡಿಸಿದ್ದಾರೆ. ಈ ಕೃತ್ಯ ಎಸಗಿದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಸಂತ್ರಸ್ಥರಾಗಿರುವ ಕೃಷಿಕ ನಾಣಿಯಪ್ಪ ಅವರಿಗೆ ಅರಣ್ಯ ಇಲಾಖೆ ಪರಿಹಾರ ಒದಗಿಸಬೇಕೆಂದು ಸಮಿತಿ ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಯಲಿದೆ. ಆರಂಭಿಕ ಹಂತವಾಗಿ ಸರ್ವೆ ನಡೆಸಿ, ನಮ್ಮ ಬೇಡಿಕೆಗೆ ಸ್ಪಂದಿಸುತ್ತಿರುವುದರಿAದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಸುರೇಶ್ ಚಕ್ರವರ್ತಿ ಮಾಹಿತಿ ನೀಡಿದ್ದಾರೆ.