ಕನ್ನಡ ಸಾಹಿತ್ಯದ ತಾಯಿ ಬೇರಾದ ಜನಪದ ಸಾಹಿತ್ಯದಲ್ಲಿ ಬಡತನದ ಕುರಿತು ಹೀಗೆ ಬಣ್ಣಿಸಲಾಗಿದೆ.
ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ತೊಟ್ಟು ಬಡತನದಲ್ಲಿರುವವರನ್ನು ನಿಂದಿಸಬಾರದು, ಬೈಯ್ಯಬಾರದು, ಬಂಗಾರ ಶ್ರೀಮಂತಿಕೆ ಯಾರಲ್ಲೂ ಸ್ಥಿರವಾಗಿರುವುದಿಲ್ಲ. ಅದು ಬಂದಷ್ಟೇ ವೇಗವಾಗಿ ದೂರಾಗಬಹುದು. ಮಧ್ಯಾಹ್ನದ ಬಿಸಿಲು ಸ್ವಲ್ಪ ಹೊತ್ತಿನಲ್ಲೇ ಇಳಿದು ಹೋಗಿ ನೆರಳು ಬರುವಂತೆ ಶ್ರೀಮಂತಿಕೆ ಇಳಿಯುತ್ತದೆ. ಶ್ರೀಮಂತಿಕೆಯಿAದ ಬಡವರನ್ನು ಹೀಯಾಳಿಸಬಾರದು, ಶಾಶ್ವತವಲ್ಲ ತಾತ್ಕಾಲಿಕವಾದದ್ದು. ಶ್ರೀಮಂತಿಕೆ ಬಂದು ಹೋಗುವಂತದ್ದು, ಅದಕ್ಕೆ ಚಂಚಲ ಮನಸ್ಸಿದೆ. ಬಡತನಕ್ಕೆ ಶಾಶ್ವತವಾದ ನೆಲೆ ಇದೆ ಎಂದು ಜನಪದರು ನಂಬಿದ್ದಾರೆ. ಇವರ ಪ್ರಕಾರ ಮಗುವೊಂದು ಬಡತನದ ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲಿ ಮರಣವನ್ನಪ್ಪುತ್ತದೆ. ಅಂದರೆ ತಂದೆ ಸಾಲದಲ್ಲಿ ಮುಳುಗಿದ್ದಾಗ ಹುಟ್ಟಿ, ಬೆಳೆದು ತಂದೆಯ ಸಾಲವನ್ನೇ ತೀರಿಸುತ್ತಾ ಮತ್ತೆ ತಾನು ಬಡತನದಲ್ಲಿ ಸಾಲ ತೀರಿಸಲಾಗದೆ ಸಾವನಪ್ಪುವ ಸ್ಥಿತಿ. ಬಡತನ ಕೆಲ ಮನುಷ್ಯನಿಗಿರುವ ದೊಡ್ಡ ಶಾಪ. ಉಳ್ಳವರ ದರ್ಪದ ನಡುವೆ ಇಲ್ಲದವರು ನಡೆಸುವ ಕತ್ತಲೆಯ ಬದುಕು.
ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ಬಡತನದ ಜೀವನವನ್ನು ನಡೆಸಿರುತ್ತಾನೆ. ಆದರೆ ಶಾಶ್ವತ ಬಡತನದಲ್ಲಿರುವವರ ಬಡತನವನ್ನು ನಿರ್ಮೂಲನ ಮಾಡುವುದಕ್ಕಾಗಿಯೇ ಪ್ರತಿ ವರ್ಷ ಅಕ್ಟೋಬರ್ ೧೭ರಂದು ಅಂತಾರಾಷ್ಟಿçÃಯ “ಬಡತನ ನಿರ್ಮೂಲನಾ ದಿನ”ವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬಡತನ ತೊಡೆದು ಹಾಕುವುದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ೨೨, ೧೯೯೨ ರಂದು ಅಂಗೀಕರಿಸಿದ ೪೭/೧೯೬ ನಿರ್ಣಯದ ಮೂಲಕ, Uಓ ಜನರಲ್ ಅಸೆಂಬ್ಲಿಯು ಅಕ್ಟೋಬರ್ ೧೭ ೧೯೮೭ ರಿಂದ ಬಡತನ ನಿರ್ಮೂಲನೆಗಾಗಿ ಅಂತರರಾಷ್ಟಿçÃಯ ದಿನವೆಂದು ಘೋಷಿಸಿತು.
ಬಡತನದ ಮೊದಲ ಪೆಟ್ಟು ಬೀಳುವುದು ಮನುಷ್ಯ ಮಗುವಿನ ಹೊಟ್ಟೆ ಬಟ್ಟೆಗೆ, ನಂತರದ ಹೆಜ್ಜೆ ವಿದ್ಯೆಗೆ. ಅದಕ್ಕಿಂತಲೂ ಅಪಾಂiÀ Äಕಾರಿಯಾದ ಪರಿಸ್ಥಿತಿ ಗಳೇಂದರೆ ಸುರಕ್ಷಿತವಲ್ಲದ ವಸತಿ, ವಾಸ ಸ್ಥಳ, ಅಪೌಷ್ಟಿಕವಾದ ಆಹಾರ, ಹೆಚ್ಚು ಅನ್ಯಾಯಗಳಿಗೆ ಒಳಗಾಗುವುದು, ದೈಹಿಕ ಮತ್ತು ಮಾನಸಿಕವಾಗಿ ದಂಡನೆಗೆ ಗುರಿಯಾಗುವುದು, ಅವಮಾನಗಳು, ಅನಾರೋಗ್ಯಕರ ದೈಹಿಕ ಸ್ಥಿತಿ. ಈ ವಾತಾವರಣವನ್ನು ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ಅನುಭವಿಸುತ್ತಾರೆ.
ವಿಶ್ವದಾದ್ಯಂತ ಮಕ್ಕಳು ದೊಡ್ಡವರಿಗಿಂತ ಬಡತನದಲ್ಲಿ ಹೆಚ್ಚು ಬದುಕುತ್ತಾರೆ. ಬಡತನದ ಪರಿಣಾಮಗಳು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡುತ್ತದೆ
ಪ್ರಪAಚದಾದ್ಯAತ, ಮಕ್ಕಳು ವಯಸ್ಕರಿಗಿಂತ ಬಡತನದಲ್ಲಿ ಬದುಕುವ ಸಾಧ್ಯತೆ ಹೆಚ್ಚು. ಅವರು ಅದರ ಪರಿಣಾಮಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಆಶ್ರಯ, ಆಹಾರ, ನೀರು, ಶಿಕ್ಷಣ ಅಥವಾ ಆರೋಗ್ಯ ರಕ್ಷಣೆಯಿಂದ ವಂಚಿತರಾಗಿ ಬೆಳೆಯುವುದು ಮಗುವಿನ ಹಕ್ಕುಗಳ ಉಲ್ಲಂಘನೆಯಾದAತೆ. ಬಡತನವೆನ್ನುವುದು ಕೇವಲ ದುಡ್ಡಿನ ಮೇಲೆ ನಿರ್ಧರಿತವಾಗುವುದಿಲ್ಲ. ಮೂಲಭೂತ ಅವಶ್ಯಕತೆಗಳನ್ನು ಒಳಗೊಂಡಿರುತ್ತದೆ.
ಇವತ್ತಿಗೂ ಕೂಡ ಜಗತ್ತಿನಲ್ಲಿ ಅದೆಷ್ಟೋ ಜನರು ಒಂದೊತ್ತಿನ ಊಟವಿಲ್ಲದೇ ಸಾಯುತ್ತಿದ್ದಾರೆ. ಹೀಗಾಗಿ ವಿಶ್ವವನ್ನೇ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಲ್ಲಿ ಒಂದೆAದರೆ ಬಡತನ. ಆದರೆ ಇದರಿಂದ ಹೊರಬರಲು ಅಭಿವೃದ್ಧಿಶೀಲ ರಾಷ್ಟçಗಳು, ಬಡರಾಷ್ಟçಗಳು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇವೆ. ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆಯೇ ಹೊರತು ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ.
ಈ ಬಡತನ ತೊಡೆದು ಹಾಕುವುದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶ ದಿಂದ ಅಕ್ಟೋಬರ್ ೧೭ ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಬಡತನ ನಿರ್ಮೂಲನೆ ಎಂಬ ವಿಷಯಕ್ಕೆ ಬಂದಾಗ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ.
೧. ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಆದಾಯದ ಅಂತರ ಬಹಳವಿದೆ.
೨. ಹೆಚ್ಚಿನ ಜನಸಂಖ್ಯೆಯು ಕೃಷಿಯನ್ನು ಅವಲಂಬಿಸಿದ್ದು, ಭೂಹೀನತೆ, ಹವಾಮಾನ ವೈಪರೀತ್ಯ ಕೂಲಿ ಕಾರ್ಮಿಕರ ಕೊರತೆ, ಗುತ್ತಿಗೆ ಆಧಾರದ ದುಡಿಮೆಯ ಸವಾಲುಗಳು.
೩. ನಿರುದ್ಯೋಗ ಮತ್ತು ಕಡಿಮೆ ಹಣ ಸಂಪಾದನೆ.
೪. ಗುಣಮಟ್ಟದ ಸಮಾನ ಶಿಕ್ಷಣದ ಕೊರತೆ ಇದು ಸಾಮಾಜಿಕ-ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ.
೫. ಆರೋಗ್ಯ ರಕ್ಷಣಾ ಸೌಲಭ್ಯ ಕೊರತೆ ೬. ಸಾಮಾಜಿಕ ತಾರತಮ್ಯವು ಬಡತನವನ್ನು ಶಾಶ್ವತಗೊಳಿಸುತ್ತದೆ.
೭. ಹವಾಮಾನ ಬದಲಾವಣೆ ಮತ್ತು ಪರಿಸರ ನಾಶವು ಜೀವನವನ್ನು ಅಸ್ತವ್ಯಸ್ತಗೊಳಿಸಿ ದುರ್ಬಲತೆಯನ್ನುಂಟು ಮಾಡುತ್ತದೆ.
ಸರ್ಕಾರದ ಯೋಜನೆಗಳು ಬಡವರನ್ನು ತಲುಪದೇ ಇರುವುದು.
ಕನ್ನಡದ ‘ಆಸ್ತಿ’ ಎಂದು ಹೆಸರುಗಳಿಸಿರುವ ‘ಮಾಸ್ತಿ’ ರವರ ಪೂರ್ವಿಕರು ವೈಭವದ ಶ್ರೀಮಂತಿಕೆಯನ್ನು ಹೊಂದಿದ್ದರು, ಆದರೆ ಮಾಸ್ತಿ ರವರ ಕಾಲಕ್ಕೆ ಬಡತನ ಉಂಟಾದ ಕಾರಣ ಇವರು ಸರಳ ಜೀವನವನ್ನು ಮೈಗೂಡಿಸಿಕೊಂಡು ಸರಳತೆಯಲ್ಲಿ ಬದುಕಿ ತೋರಿಸಿದರು. ಪರಸ್ಪರ ಹಂಚಿ ತಿನ್ನುವುದು, ಶ್ರೀಮಂತಿಕೆ - ಬಡತನವೆಂಬ ಭೇದ ಭಾವವಿಲ್ಲದೆ ಗೆಳೆತನವನ್ನು ಮಾಡಿಕೊಂಡಾಗ ಬಡತನವನ್ನು ಮಟ್ಟ ಹಾಕಲು ಬಹುದು.
ಪುನೀತ್ ರಾಜ್‌ಕುಮಾರ್‌ರವರು ಬಡವರಿಗೆ ಮನೆ ಕಟ್ಟಿಸಿ ಕೊಡುವುದರ ಮೂಲಕ “ಬಡತನ ನಿರ್ಮೂಲನ” ಮಾಡಲು ಕೈಜೋಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
“ಹಸಿವಿನಲ್ಲೂ ಹಬ್ಬಾನೇ
ದಿನವು ನಿತ್ಯ ಯುಗಾದಿನೇ...
ನನ್ನ ನಿಮ್ಮ ಪಾಲಿಗೇ
ಪ್ರೀತಿನೆ ಆ ದ್ಯಾವ್ರು ತಂದಾ
ಆಸ್ತಿ ನಮ್ಮ ಬಾಳ್ವೆಗೆ” ಈ ಗೀತೆ ಬಡತನದ ಬವಣೆಯನ್ನು ಚಿತ್ರಿಸಿಕೊಡುತ್ತದೆ.
ಕೊನೆಹನಿ : ಶ್ರೀಮಂತಿಕೆ ಅತಿಥಿ, ಬಡತನ ಮೈ ಗಂಟಿದ ಚರ್ಮ.