ಸಿದ್ದಾಪುರ, ಅ. ೧೬: ಗುಹ್ಯ ಗ್ರಾಮದ ಅಗಸ್ತೆö್ಯÃಶ್ವರ ದೇವಸ್ಥಾನದ ಐದು ದಿನಗಳ ಜಾತ್ರೆ ಶ್ರದ್ಧಾಭಕ್ತಿಯಿಂದ ನಡೆಸಲಾಗುವುದು. ಗುಹ್ಯ ಅಗಸ್ತ್ಯೇಶ್ವರ ದೇವಸ್ಥಾನವು ಕೊಡಗಿನಲ್ಲಿ ಮೊದಲು ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನವಾಗಿದೆ. ಕೊಡಗಿನಲ್ಲಿ ಕಾವೇರಿ ನದಿ ಪಾತ್ರದಲ್ಲಿರುವ ಮೂರನೆಯ ದೇವಸ್ಥಾನವಾಗಿದ್ದು ಮಹಾವಿಷ್ಣುಗೆ ದರ್ಶನ ನೀಡಿ ಈ ಕ್ಷೇತ್ರದಲ್ಲಿ ನೆಲೆನಿಂತ ಮಹಾದೇವರ ಅಗಸ್ತö್ಯ ಮುನಿಯಿಂದ ಸ್ಥಾಪಿಸಲ್ಪಟ್ಟ ಈಶ್ವರ ದೇವಾಲಯ ಮುಂದೆ ಅಗಸ್ತೆö್ಯÃಶ್ವರ ಎಂದೇ ಪ್ರಸಿದ್ಧಿ ಪಡೆದಿದೆ. ತುಲಾಮಾಸ ದಿವಸ ಏಕಾದಶಿ ಸಮಯದಲ್ಲಿ ಶ್ರೀ ಅಗಸ್ತೆö್ಯÃಶ್ವರ ಮಹಾದೇವರ ಪ್ರಾರ್ಥನೆಯೊಂದಿಗೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತಾ. ೧೭ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ
ಶ್ರೀ ಸತ್ಯನಾರಾಯಣ ಪೂಜೆಯಿಂದ ಆರಂಭಿಸಿ ಅದೇ ಮೂಲಕ ದಿವಸ ಸಂಜೆ ೬ ಗಂಟೆಗೆ ತಂತ್ರಿ ವ್ಯೆದಿಕರು, ತಕ್ಕರು ಹಾಗೂ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಕಾವೇರಿ ಸಂಕ್ರಮಣ ದಿನದೆಂದು ದೇವರ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವ ಆರಂಭವಾಯಿತು. ಸತ್ಯನಾರಾಯಣ ಪೂಜೆ, ರಂಗಪೂಜೆ, ಮಹಾಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ. ಕ್ಷೀರಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿವೆ. ಉತ್ಸವ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.