ಮಡಿಕೇರಿ, ಅ. ೧೬: ಮಡಿಕೇರಿ ನಗರಸಭಾ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷÀ ಪ್ರಸಾದ್ ಅಬ್ಬಯ್ಯ ಅವರು ಭೇಟಿ ನೀಡಿದರು.

ಮಲ್ಲಿಕಾರ್ಜುನ ನಗರ ಮತ್ತು ತ್ಯಾಗರಾಜ ನಗರ ಕಾಲೋನಿಗಳಿಗೆ ಭೇಟಿ ನೀಡಿದ ಅವರು ಮೂಲಭೂತ ಸಮಸ್ಯೆಗಳ ಕುರಿತು ನಗರಸಭಾ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದರು. ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದರು.

ನಗರಸಭಾ ಅಧ್ಯಕ್ಷರು ಹಾಗೂ ಮಲ್ಲಿಕಾರ್ಜುನ ನಗರ ವಾರ್ಡ್ನ ಸದಸ್ಯರೂ ಆಗಿರುವ ಪಿ.ಕಲಾವತಿ, ತ್ಯಾಗರಾಜ ನಗರದ ಸದಸ್ಯೆ ಮೇರಿವೇಗಸ್, ಮೈಸೂರು ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಕುಮಾರ್ ಈಶ್ವರ, ಕಿರಿಯ ಅಭಿಯಂತಕರು ಲಕ್ಷಿö್ಮÃಶ್ ಗೌಡ, ಮಡಿಕೇರಿ ನಗರಸಭೆಯ ಹಿರಿಯ ಅಭಿಯಂತರ ಸತೀಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವೂಫ್ ಎಂ.ಎನ್, ೪ಮೂg ಡಿಸಿಸಿ ಸದಸ್ಯ ಕಲೀಲ್ ಬಾಷಾ, ವಿನೋದ್, ಬೂತ್ ಸದಸ್ಯರಾದ ಗಣೇಶ್, ಮಲ್ಲೇಶ್, ಕೋದಂಡ ರಾಮ ಸೇವಾ ಸಮಿತಿಯ ಅಧ್ಯಕ್ಷ ನಂಜುAಡ, ಸದಸ್ಯರು, ಸ್ಥಳೀಯ ನಿವಾಸಿಗಳಾದ ಜಲೀಲ್, ಸಲೀಂ, ಮತ್ತಿತರರು ಹಾಜರಿದ್ದರು.