ಗೋಣಿಕೊಪ್ಪ ವರದಿ, ಅ. ೧೬ ; ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಟ್ಟಡದಲ್ಲಿ ಕೂರ್ಗ್ ಸಿನಿಪ್ಲೆಕ್ಸ್ ಚಿತ್ರ ಮಂದಿರವನ್ನು ಉದ್ಘಾಟಿಸಲಾಯಿತು.

ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಕುಪ್ಪಂಡ ವಿಜು ಚಿಟ್ಯಪ್ಪ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಸಂಘದ ನಿರ್ದೇಶಕರು ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರಾಜೆಕ್ಟರ್ ಉದ್ಘಾಟಿಸಿ ಚಾಲನೆ ನೀಡಿದರು.

ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಸಂಭ್ರಮದಲ್ಲಿ ಭಾಗಿಯಾದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಕೆ. ಪ್ರತಾಪ್ ಇದ್ದರು.