ಮಡಿಕೇರಿ, ಅ. ೧೬ : ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ತುಲಾ ಸಂಕ್ರಮಣ ಜಾತ್ರೆ ಹಿನ್ನೆಯಲ್ಲಿ ಸ್ವಾಗತ ಕೋರಿ ಮಡಿಕೇರಿಯಿಂದ ತಲಕಾವೇರಿವರೆಗೆ ಹಾಕಲಾಗಿದ್ದ ಫಲಕಗಳನ್ನು (ಫ್ಲೆಕ್ಸ್) ಯಾರೋ ಹರಿದು ಹಾಕಿರುವ ಬಗ್ಗೆ ಒಕ್ಕೂಟ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಭಾಗಮಂಡಲ ೪ಮೂರನೇ ಪುಟಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಟ್ಟಗೇರಿ ಗ್ರಾಮದ ಬಕ್ಕ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಫಲಕಗಳನ್ನು ಹರಿದು ಹಾಕಲಾಗಿದ್ದು, ಈ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಅವರು ಪೊಲೀಸ್ ದೂರು ನೀಡಿದ್ದಾರೆ. ಈ ಸಂದರ್ಭ ಒಕ್ಕೂಟದ ನಿರ್ದೇಶಕ ಚಿಲ್ಲನ ಗಣಿಪ್ರಸಾದ್, ಕಾನೂನು ಸಲಹೆಗಾರ ಕೊಂಬಾರನ ರೋಷನ್, ವಕೀಲ ಕೋರನ ಪ್ರಭಾಕರ ಇದ್ದರು.
ಖಂಡನೆ : ಪವಿತ್ರ ಕಾವೇರಿ ತೀರ್ಥೋದ್ಭವ ಪ್ರಯುಕ್ತ ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಕಾವೇರಿಗೆ ಆಗಮಿಸುವ ಭಕ್ತರಿಗೆ ಸ್ವಾಗತಕೋರಲು ಕಾರುಗುಂದ, ಬೆಟ್ಟಗೇರಿ ರಸ್ತೆ ಬದಿ ಅಳವಡಿಸಲಾದ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಕೃತ್ಯವನ್ನು ಹೆಸಗಿರುವ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಲ್ಲದೆ, ಘಟನೆಯನ್ನು ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯ ನಾಪಂಡ ರ‍್ಯಾಲಿ ಮಾದಯ್ಯ ಖಂಡಿಸುವುದಾಗಿ ಹೇಳಿದ್ದಾರೆ. ಇಂಥ ಕೆಲಸ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮತ್ತು ಈ ಕೃತ್ಯವನ್ನು ಕಾರುಗುಂದ ಗೌಡ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಖಂಡಿಸುವುದಾಗಿ ತಿಳಿಸಿದೆ.