ಗೋಣಿಕೊಪ್ಪಲು, ಅ. ೧೫: ‘ಸ್ವಚ್ಛ ಕೊಡಗು-ಸುಂದರ ಕೊಡಗು’ ಅಭಿಯಾನ ಗೋಣಿಕೊಪ್ಪಲುವಿನಲ್ಲಿ ನಡೆಯಿತು.
ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ, ಉದ್ಯಮಿ ಕೊಲ್ಲೀರ ಉಮೇಶ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ಪರಿಮಳ ಮಂಗಳ ವಿಹಾರದಿಂದ ಆರಂಭಗೊAಡ ಸ್ವಚ್ಚತಾ ಕಾರ್ಯ ಆರ್‌ಎಂಸಿ ಬಳಿ ಮುಕ್ತಾಯವಾಯಿತು. ರಸ್ತೆಯ ಎರಡು ಬದಿಯಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿದರು. ಸಂಗ್ರಹವಾದ ಕಸಗಳನ್ನು ಲಾರಿಗಳ ಮೂಲಕ ಸಾಗಿಸಿ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಂಗ್ರಹಿಸಿಡಲಾಯಿತು. ಇಲ್ಲಿಗೆ ಆಗಮಿಸಿದ ೪ ಲಾರಿಗಳಲ್ಲಿ ತ್ಯಾಜ್ಯ ವನ್ನು ತುಂಬಿ ಮೈಸೂರಿಗೆ ರವಾ ನಿಸಲಾಯಿತು. ೪ಮೂರನೇ ಪುಟಕ್ಕೆ ವಿನೂತನ ಪರಿಕಲ್ಪನೆಯ ‘ಸ್ವಚ್ಛ ಕೊಡಗು ಸುಂದರ ಕೊಡಗು’ ಕಾರ್ಯಕ್ರಮಕ್ಕೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಈ ಆಂದೋಲನದಲ್ಲಿ ಭಾಗಿಗಳಾಗಿದ್ದರು. ಉಮಾಮಹೇಶ್ವರಿ ಪೆಟ್ರೋಲ್ ಬಂಕ್ ಮಾಲೀಕ ಕೊಲ್ಲೀರ ಉಮೇಶ್ ಸ್ವಚ್ಛತಾ ಕಾರ್ಯಕ್ಕೆ ೩ ಟಿಪ್ಪರ್ ಹಾಗೂ ಇತರೆ ವಾಹನಗಳನ್ನು ಒದಗಿಸಿದ್ದರು. ದುರ್ಗಾಬೋಜಿ ಗ್ರೂಪ್ಸ್ ವತಿಯಿಂದ ೩ ಲಾರಿಗಳನ್ನು ಕಸ ಸಂಗ್ರಹಣೆಗೆ ನೀಡಲಾಗಿತ್ತು.
ವಿಧಾನ ಪರಿಷತ್ತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಸ್ವಚ್ಛತಾ ಕಾರ್ಯವು ನಿರಂತರವಾಗಿ ನಡೆಯಬೇಕು. ನಮ್ಮ ಕೊಡಗನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪ್ರವಾಸಕ್ಕೆ ಬರುವ ಪ್ರವಾಸಿಗರು ರಸ್ತೆ ಬದಿಯಲ್ಲಿ ಕಸವನ್ನು ಬಿಸಾಡದೆ ನಿಗದಿತ ಸ್ಥಳದಲ್ಲಿ ಕಸವನ್ನು ಹಾಕುವಂತೆ ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಈ ವಿಶೇಷ ಆಂದೋಲನವು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿದೆ. ಮುಂದೆ ಇದೇ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೀರೆ ಹೊಳೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು, ಎಲ್ಲೆಂದರಲ್ಲಿ ಕಸಗಳನ್ನು ಬಿಸಾಕುವುದು ನಿಲ್ಲಬೇಕು.
ಸ್ವಚ್ಛತೆಗೆ ಆದ್ಯತೆ ಬೇಕಾಗಿದೆ. ಮದುವೆ ಮಂಟಪಗಳ ಸುತ್ತ ಮುತ್ತಲಿನಲ್ಲಿ ಮದ್ಯದ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯವನ್ನು ಬಿಸಾಕದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಆಂದೋಲನ ಆಯೋಜಿಸುವ ಮೂಲಕ ಕೊಡಗನ್ನು ಸ್ವಚ್ಛತಾದೆಡೆಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಾವುಗಳೆಲ್ಲಾರು ಭಾಗಿಗಳಾಗಿದ್ದೇವೆ. ಗ್ರಾಮದ ಸ್ವಚ್ಛತೆಯೊಂದಿಗೆ ನಾವುಗಳು ಶುಚಿತ್ವವನ್ನು ಕಾಪಾಡೋಣ ಎಂದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪ, ಹಾತೂರು, ಗ್ರಾಮ ಪಂಚಾಯಿತಿಗಳ ಸದಸ್ಯರುಗಳು ಸೇರಿದಂತೆ ಸವಿತಾ ಸಮಾಜ, ಆಟೋ ಚಾಲಕರ ಸಂಘ, ಒಕ್ಕಲಿಗರ ಸಂಘ, ಕಾವೇರಿ ಕಾಲೇಜು ವಿದ್ಯಾ ಸಂಸ್ಥೆ, ಕಾವೇರಿ ಹಿಲ್ಸ್ ಬಡಾವಣೆ ಸಂಘದವರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.