ಕೂಡಿಗೆ, ಅ. ೧೨: ಕೂಡಿಗೆ ಕೊಡವ ಕೂಟದ ಕೈಲ್ ಪೊಳ್ದ್ ಹಬ್ಬದ ಸಂತೋಷ ಕೂಟವು ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ಕೂಡುಮಂಗಳೂರು ಬರ್ಡ್ ಆಫ್ ಪ್ಯಾರಡೈಸ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ನಮ್ಮ ಜನಾಂಗದ ಆಚಾರ ವಿಚಾರಗಳನ್ನು ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.

ನಾವು ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತೇವೆ ಆದರೆ ಮಕ್ಕಳು ಅಲ್ಲಿಯೇ ಇರಲು ಬಯಸುತ್ತಾರೆ ಅದಕ್ಕೆ ದಯವಿಟ್ಟು ಅವಕಾಶ ಕೊಡಬೇಡಿ ಎಂದು ಕಿವಿ ಮಾತು ಹೇಳಿದರು. ಅಧ್ಯಕ್ಷ ಮನು ನಂಜುAಡ ಮಾತನಾಡಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸಿಸಬೇಕು. ಎಲ್ಲರೂ ಆರೋಗ್ಯ ವಿಮೆ ಮಾಡಿಸಿ ಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್ ಖಜಾಂಚಿ ದೇಯಂಡ ಪೊನ್ನಪ್ಪ ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ, ಐಮುಡಿಯಂಡ ರಮೇಶ್, ಪಟ್ಟಡ ಚಿಟ್ಟಿಯಪ್ಪ, ಮುಕ್ಕಾಟಿರ ಮನು ತಿಮ್ಮಣ್ಣ, ಪಾಲೇಂಗಡ ಸುಜಾ ಸತೀಶ್, ಪಟ್ಟಡ ಬೀನ ಚಿಟ್ಟಿಯಪ್ಪ ಉಪಸ್ಥಿತರಿದ್ದರು. ಕೊಡಿಮಣಿಯಂಡ ಸಾವಿತ್ರಿ ಕುಮಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.