ಶ್ರೀಮಂಗಲ, ಅ. ೧೨: ಗೋಣಿಕೊಪ್ಪ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಮಕ್ಕಳ ಪರಿಕಲ್ಪನೆಯಲ್ಲಿ ವಿಜ್ಞಾನಲೋಕ ಅನಾವರಣಗೊಂಡಿತ್ತು. ಜ್ಞಾನದಲ್ಲಿ ವಿಜ್ಞಾನ ಎನ್ನುವಂತೆ ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾದ ವಿಜ್ಞಾನ ವಸ್ತು ಪ್ರದರ್ಶನವನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಉದ್ಘಾಟಿಸಿದರು. ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.