ಮಡಿಕೇರಿ, ಅ. ೭: ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಅಧಿಕಾರಿ, ಶಿಶು ಅಭಿವೃದ್ದಿ ಇಲಾಖಾ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮತ್ತು ವ್ಯವಸ್ಥಾಪಕರು ಕೆ.ಎಸ್.ಆರ್.ಟಿ.ಸಿ ರವರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ಶಿಶುಅಭಿವೃದ್ದಿ ಅಧಿಕಾರಿ ಅವರು ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಜೂನ್ ಅಂತ್ಯಕ್ಕೆ ಹಣ ಮಂಜೂರಾಗಿರುವ ಒಟ್ಟು ಫಲಾನುಭವಿಗಳ ಸಂಖ್ಯೆ ೩೦,೩೦೭, ಪಾವತಿಯಾದ ಒಟ್ಟು ಮೊತ್ತ ಜೂನ್ ಮಾಹೆಯ ಅಂತ್ಯಕ್ಕೆ ೬,೦೬,೧೪,೦೦೦ ರೂ. ಓPಅI, ಏಙಅ ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ ೧೬೬, ಐಟಿ, ಜಿಎಸ್ಟಿ ಪಾವತಿದಾರರು ಎಂದು ತಿರಸ್ಕೃತಗೊಂಡ ಫಲಾನುಭವಿಗಳ ಸಂಖ್ಯೆ ೭೮೪ ಹಾಗೂ ಪ್ರಧಾನ ಕಚೇರಿಯಿಂದ ಫೆಬ್ರವರಿ ಹಾಗೂ ಮಾರ್ಚ್ -೨೦೨೫ರ ಮಾಹೆಯ ಹಣ ಪಾವತಿಯಾಗಲು ಬಾಕಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ೧,೩೧,೭೪,೬೪೮ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೩,೦೫,೧೩೨ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಒಟ್ಟಾರೆ ೧,೩೪,೭೯,೭೮೦ ಜನ ಮಹಿಳಾ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆ ಪಡೆದುಕೊಂಡಿರುತ್ತಾರೆ ಎಂದರು.
೨೦೨೩-೨೦೨೪ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಯುವನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ.
ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಧಿ ಯೋಜನೆಯಲ್ಲಿ ಆಗಸ್ಟ್ ಮಾಹೆಯವರೆಗೆ ೪೯೩ ನೋಂದಣಿಯಾಗಿದ್ದು ಜುಲೈನಲ್ಲಿ ನೋಂದಾಯಿತ ಫಲಾನುಭವಿಗಳಿಗೆ ರೂ. ೧೨,೦೪,೫೦೦ ಹಣ ಬಿಡುಗಡೆಯಾಗಿರುತ್ತದೆ ಎಂದು ಸಭೆಗೆ ಅಧಿಕಾರಿ ಮಾಹಿತಿ ನೀಡಿದರು.
ಚೆಸ್ಕಾಂ ಇಲಾಖಾಧಿಕಾರಿ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೫೧೯೧೮ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ ೫೧೫೨೧ ನೋಂದಣಿಗೊAಡ ಅರ್ಜಿಗಳಾಗಿದ್ದು, ೩೯೭ ಬಾಕಿ ಇರುವ ಸ್ಥಾವರಗಳಿದ್ದು ಶೇ.೯೯.೨೩ ಶೇಕಡವಾರು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೩೮,೩೬೩ ಪಡಿತರ ಚೀಟಿ ಇದ್ದು ೧,೨೦,೮೬೫ ಒಟ್ಟು ಫಲಾನುಭವಿಗಳಿರುತ್ತಾರೆ ಅದರಲ್ಲಿ ೧೯೭೩ ಎಎವೈ ಪಡಿತರ ಚೀಟಿ ಇದ್ದು ೭೮೯೭ ಎಎವೈ ಫಲಾನುಭವಿಗಳು ಇರುತ್ತಾರೆ. ೨೨೬೦೬ ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು ೭೩೨೯೫ ಫಲಾನುಭವಿಗಳು,೧೩೭೮೪ ಎನ್ ಪಿ ಹೆಚ್ ಹೆಚ್ ಪಡಿತರ ಚೀಟಿ ಇದ್ದು ೩೯೬೭೩ ಫಲಾನುಭವಿಗಳಿದ್ದು, ಮಡಿಕೇರಿ ತಾಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ ೪೪೧ ಆಗಿರುತ್ತದೆ ಹಾಗೂ ಈ ಪಡಿತರ ಚೀಟಿದಾರರು, ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸಭೆಗೆ ತಿಳಿಸಿದರು.
ಪಡಿತರ ಚೀಟಿಯ ಯಾವುದೇ ಸದಸ್ಯ ೪ ಚಕ್ರ ವಾಹನ ಹೊಂದಿದ್ದಲ್ಲಿ ಅಂತಹವರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೦೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿಯನ್ನು ಸಾಧಿಸಿದ್ದು ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸರ್ಕಾರದ ಮಹತ್ವಾಕಾಂಕ್ಷಿ ೦೫ ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಹಾಗೂ ಗ್ಯಾರಂಟಿ ಯೋಜನೆಗೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಯನ್ನು ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.