ಮಡಿಕೇರಿ, ಅ. ೭: ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೪-೨೫ನೇ ಸಾಲಿಗೆ ರೂ. ೨೦,೭೮,೪೪೭-೧೩ ರಷ್ಟು ನಿವ್ವಳ ಲಾಭಗಳಿಸಿದ್ದು ‘ಎ’ ಗ್ರೇಡ್ ಪಡೆದಿದೆ ಎಂದು ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ತಿಳಿಸಿದರು.

ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಪ್ರಸ್ತುತ ೨೦೧೬ ಸದಸ್ಯರನ್ನು ಹೊಂದಿದ್ದು, ೨೦೨೪-೨೫ನೇ ಸಾಲಿನವರೆಗೆ ರೂ. ೪,೯೪,೦೬,೭೧೫ ರಷ್ಟು ಠೇವಣಿ ಸಂಗ್ರಹಿಸಲಾಗಿದೆ.

ಸAಘದಲ್ಲಿ ಪಾಲು ಬಂಡವಾಳ ರೂ. ೮,೪೦,೭೭೭ ರಷ್ಟು ಇದ್ದು, ಕೃಷಿ ಫಸಲು ಸಾಲ ರೂ. ೬,೨೫,೦೩,೨೩೦, ಮಧ್ಯಮಾವಧಿ ಸಾಲ ರೂ. ೧,೯೨,೯೧,೧೩೮, ಆಭರಣ ಈಡಿನ ಸಾಲ ೭೨,೭೫,೭೬೦ ಜಾಮೀನು ಸಾಲ ರೂ. ೧,೦೮,೬೭,೬೦೦, ಜಂಟಿ ಬಾಧ್ಯತಾ ಗುಂಪಿನ ಸಾಲ ರೂ. ೭,೩೫,೦೦೦ ಸ್ವಸಹಾಯ ಗುಂಪಿನ ಸಾಲ ರೂ. ೩,೦೮,೨೬೧, ನಿರಖು ಠೇವಣಿ ಸಾಲ ರೂ. ೭.೭೦ ಲಕ್ಷ, ವೇತನ ಆಧಾರಿತ ಸಾಲ, ರೂ. ೧.೮೦ ಲಕ್ಷ, ಗೊಬ್ಬರ ಸಾಲ ರೂ. ೨೨,೦೬,೩೫೦ ಸೇರಿದಂತೆ ಒಟ್ಟು ೧೦,೪೧,೩೭,೩೩೯ ರಷ್ಟು ಸಾಲವನ್ನು ವಿತರಿಸಲಾಗಿದೆ ಎಂದು ಸಂಜಯ್ ಪೂಣಚ್ಚ ತಿಳಿಸಿದರು.

ಸಂಘದ ನೂತನ ಕಟ್ಟಡದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ೧೫ ಸೇಫ್ ಲಾಕರ್ ಕ್ಯಾಬಿನೆಟ್ ಸೇವೆ ಒದಗಿಸಲಾಗಿದ್ದು, ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದರು. ಕನಿಷ್ಟ ಸಂಖ್ಯೆಯ ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗಲು ತಪ್ಪಿದರೆ ಮತದಾನ ಹಕ್ಕನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದರು.

ಸAಘದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಸದಸ್ಯರು ಸಕಾಲದಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವ ಮೂಲಕ ಸಂಘದ ಮತ್ತಷ್ಟು ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಕರೆ ನೀಡಿದರು. ಸಂಘದ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ತುಳಸಿ ಕೆ.ಬಿ. ಅವರು ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಅಗಲಿದ ಸದಸ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮೌನಚರಣೆ ಮಾಡಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ವಾಂಚಿರ ಕೆ. ಅಜಯ್ ಕುಮಾರ್, ನಿರ್ದೇಶಕರಾದ ನೆರವಂಡ ಅನೂಪ್ ಉತ್ತಯ್ಯ, ಕರ್ಣಯನ ಬಿ. ಪ್ರಭಾಕರ, ಚೌರಿರ ಆರ್. ಅಪ್ಪಣ್ಣ, ಚೆಟ್ಟಿಮಾಡ ಹೇಮಮಾಲಿನಿ, ಮಂಡೆಪAಡ ಎ. ಅಕ್ಕವ್ವ, ವೀಣಾ ಸಣ್ಣಜನ, ಕಡ್ಲೆರ ಕೆ. ಹರ್ಷ, ಎಂ.ಕೆ. ರಾಮಣ್ಣ, ಹೆಚ್.ಆರ್. ಗಣೇಶ, ಮೇಕಂಡ ಬಿ. ಪೆಮ್ಮಯ್ಯ, ಚೌರಿರ ಎಸ್. ಉತ್ತಪ್ಪ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕಿ ಚುಷ್ಮ ಉಪಸ್ಥಿತರಿದ್ದರು. ಆರಂಭದಲ್ಲಿ ಸಂಘದ ಸದಸ್ಯೆ ಮೇಕಂಡ ಜಾನಕಿ ಪ್ರಾರ್ಥಿಸಿದರು, ಅಧ್ಯಕ್ಷ ಪೂಣಚ್ಚ ಸ್ವಾಗತಿಸಿದರು, ನಿರ್ದೇಶಕ ಅನೂಪ್ ಉತ್ತಯ್ಯ ವಂದಿಸಿದರು.