ಮೂರ್ನಾಡು, ಅ. ೭: ಮೂರ್ನಾಡಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ವಿಜೃಂಭಣೆಯಿAದ ಜರುಗಿತು.

ಇಲ್ಲಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ೩೨ನೇ ವರ್ಷದ ಆಯುಧ ಪೂಜೆಯ ಕಾರ್ಯಕ್ರಮದಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆ ನೆರವೇರಿತು.

ನಂತರ ಮುಖ್ಯ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊAಡ ವಾಹನಗಳಲ್ಲಿ ಏಳುಮಲೆ ಮುದ್ದು ಮಾದಪ್ಪ, ಬಡವರಗುಡಿಸಲು ಮನೆ, ಕೊಡಗಿನ ಕಾವೇರಿ ಮಾತೆ, ಪರಿಶುದ್ದ ಗಾಳಿಗೆ ಅಗ್ರಸ್ಥಾನ ಪಡೆದ ಮಡಿಕೇರಿ, ಶಬರಿಮಲೆ ಅಯ್ಯಪ್ಪ, ಈಸಲ ಕಪ್ ನಮ್ದೆ ಚಿನ್ನಸ್ವಾಮಿ ಕ್ರೀಡಾಂಗಣ, ವಿಷ್ಣುವಿನ ವರಾಹರೂಪಂ, ಜಸ್ಟೀಸ್ ಫಾರ್ ಸೌಜನ್ಯ, ದೇವಿ ಮಹಾತ್ಮೆ, ಪಿಲಿ ನಲಿಕೆ, ಭೂಲೋಕಕ್ಕೆ ಭೂದೇವಿಯ ಆಗಮನ, ಹೆಂಡತಿಯಿAದ ವಿಚ್ಛೇದನ ಪಡೆದ ಖುಷಿಗೆ ೪೦ ಲೀಟರ್ ಹಾಲಿನಿಂದ ಸ್ನಾನ ಮಾಡಿದ ಭೂಪ, ಹೀಗೆ ಇನ್ನು ಹಲವಾರು ಸ್ತಬ್ಧ ಚಿತ್ರಗಳು, ಕಲಾಕೃತಿಗಳು ಮತ್ತು ಕ್ಯಾಲಿಕಟ್‌ನ ಶ್ರೀಹರಿ ಕಲಾ ಸಮಿತಿಯ ಗೊಂಬೆ ಕುಣಿತ ಮತ್ತು ಸುಳ್ಯದ ವಾದ್ಯಗೋಷ್ಠಿಗಳು ನೋಡುಗರ ಗಮನ ಸೆಳೆದವು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂರ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಂ. ದೇಚಮ್ಮ ಮಾತನಾಡಿ, ಭಾರತ ಸನಾತನ ಸಂಸ್ಕೃತಿಯ ಅದ್ಧೂರಿಯ ಹಬ್ಬವೆಂದರೆ ಅದು ದಸರಾ ಹಬ್ಬವಾಗಿದೆ. ಸಮಾಜದಲ್ಲಿ ತಮ್ಮ ಜೀವನಕ್ಕೆ ಆಧಾರವಾದ ಪರಿಕರಗಳನ್ನು ಪೂಜಿಸಿ ಅದಕ್ಕೆ ಗೌರವವನ್ನು ನೀಡುವ ಮೂಲಕ ಎಲ್ಲರೂ ಆಯುಧ ಪೂಜೆಯನ್ನು ನೆರವೇರಿಸುವುದು ಗಮನಾರ್ಹವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್‌ರೈ, ವೀರಾಜಪೇಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಮತ್ತು ವಕೀಲರಾದ ಬಿ.ಎ. ಕೃಷ್ಣಮೂರ್ತಿ, ಮೂರ್ನಾಡು ಮಾರುತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮುಂಡAಡ ಅಪ್ಪಚ್ಚು, ಮಡಿಕೇರಿ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಮೂರ್ನಾಡು ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿ ಅಕ್ಷತ ಬಿ. ಶೆಟ್ಟಿ, ಬೆಂಗಳೂರಿನ ಸಿಗ್ಮಾ ನೆಟ್‌ವರ್ಕ್ನ ಮಾಲೀಕ ಅವರೆಮಾದಂಡ ಶರಣ್ ಪೂಣಚ್ಚ ಮತ್ತು ಮೂರ್ನಾಡು ಪೊಲೀಸ್ ಉಪಠಾಣಾಧಿಕಾರಿ ಪಟ್ರಪಂಡ ಮೊಣ್ಣಪ್ಪ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಿದ್ದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞÂರಾಮ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮೂರ್ನಾಡು ಪಿ.ಎಂ. ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಮೂರ್ನಾಡು ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್, ಸಂಘದ ಉಪಾಧ್ಯಕ್ಷ ಅಶ್ವಥ್‌ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಹೆಚ್.ಹೆಚ್. ಜಯಂತ್‌ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಸಂಜೀವಿನಿ ಘನ ತ್ಯಾಜ್ಯ ವಿಂಗಡಣಾ ಘಟಕದ ಮಹಿಳಾ ಸಿಬ್ಬಂದಿಗಳು ಮತ್ತು ಕಳೆದ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಅಲಂಕೃತಗೊAಡ ಸೈಕಲ್, ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ಸುಕನ್ಯ ಪ್ರಾರ್ಥಿಸಿದರು. ಅಶ್ವಥ್‌ರೈ ಸ್ವಾಗತಿಸಿ, ಎನ್.ಎನ್. ಶರಣು ವರದಿ ವಾಚಿಸಿ, ಕಿಶೋರ್‌ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಭಾ ಕಾರ್ಯಕ್ರಮದ ನಂತರ ವಿನೋದ್ ಕರ್ಕೆರ ಅವರ ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪನಿಯ ಡಿ.ಕೆ.ಡಿ. ವಿಜೇತ ರಾಹುಲ್‌ರಾವ್ ಮತ್ತು ಸಂಗಡಿಗರಿAದ ಜರುಗಿದ ನೃತ್ಯಗಳು, ಮೂರ್ನಾಡಿನ ಜಲಜ ನಾಗರಾಜ್ ಅವರ ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರ ಭರತನಾಟ್ಯ, ಜಾನಪದ ನೃತ್ಯಗಳು ಹಾಗೂ ಮೂರ್ನಾಡಿನ ಚರಣ್ ಅವರ ಸ್ಟೆಪ್‌ಅಪ್ ಗ್ರೂಪ್‌ನ ನೃತ್ಯ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.

- ಟಿ.ಸಿ. ನಾಗರಾಜ್