ಗೋಣಿಕೊಪ್ಪ ದಸರಾ ಶೋಭಯಾತ್ರೆ - ಶಾರದಾಂಭ, ಸ್ನೇಹಿತರ ಬಳಗ, ಕಾಡ್ಲಯ್ಯಪ್ಪಗೆ ಬಹುಮಾನಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ಜನೋತ್ಸವವನ್ನು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಕಣ್ತುಂಬಿಕೊAಡರು. ನಿಗದಿತ ಸಮಯದಲ್ಲಿ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ತರುವಾಯ ದೇವಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಇನ್ನುಳಿದ ೯ ಮಂಟಪಗಳು ತಮ್ಮ ತಮ್ಮ ಭಾಗದಿಂದ ಹೊರಟು ಬೈಪಾಸ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆ ಮಾರ್ಗವಾಗಿ ಉಮಾಮಹೇಶ್ವರಿ ದೇವಾಲಯ ಬಳಿಗೆ ಆಗಮಿಸಿ ನಂತರ ಸರತಿ ಸಾಲಿನಲ್ಲಿ ಒಂದರ ನಂತರ ಒಂದು ಮಂಟಪಗಳು ಮುಖ್ಯಬೀದಿಯಲ್ಲಿ ಸಾಗಿದವು. ನಗರದ ಬಸ್ ನಿಲ್ದಾಣದಲ್ಲಿ ಮಂಟಪಗಳು ಪ್ರದರ್ಶನ ನೀಡುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಮುದಗೊಳಿಸಿತು.
ಈ ಬಾರಿ ಶಾರದಾಂಭ ದಸರಾ ಸಮಿತಿ ಅರುವತ್ತೋಕ್ಲು ಇವರು ಹೊರತಂದ ಧೂಮ್ರಲೋಚನ ಸಂಹಾರ, ಕೌಶಿಕೆ ಮಹಾತ್ಮೆಯ ಕಥಾ ರೂಪಕ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಸ್ನೇಹಿತರ ಬಳಗ ಕೊಪ್ಪ ಶತಮಹಿಷಿ ಕಥಾ ಪ್ರಸಂಗಕ್ಕೆ ಬಹುಮಾನ ಗಿಟ್ಟಿಸಿತು. ಮೂರನೇ ಬಹುಮಾನವನ್ನು ಕಾಡ್ಲಯ್ಯಪ್ಪ ದಸರಾ ಸಮಿತಿಯ ಕೌಶಿಕ ಮಹಾತ್ಮೆ ಪಡೆದುಕೊಂಡಿತು. (ನಾಲ್ಕನೇ ಪುಟಕ್ಕೆ)
(ಮೊದಲ ಪುಟದಿಂದ) ಉಳಿದಂತೆ ಕಾವೇರಿ ದಸರಾ ಸಮಿತಿ, ಕೈಕೇರಿ ಭಗವತಿ, ನಾಡಹಬ್ಬ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಶಾರದಾಂಭ ದಸರಾ ಸಮಿತಿ, ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ, ಮಂಟಪಗಳ ಡಿಜೆ ಸೌಂಡ್ಸ್ ಹಾಗೂ ಕೊಡವ ವಾಲಗಕ್ಕೆ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಖಜಾಂಜಿ ಧ್ಯಾನ್ ಸುಬ್ಬಯ್ಯ, ಉಪಾಧ್ಯಕ್ಷರಾದ ಶಿವಾಜಿ, ಸಂಯೋಜಕರಾದ ಚಂದನ್ ಕಾಮತ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂಜಾನೆ ೫.೩೦ರ ಸುಮಾರಿಗೆ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಚಾಮುಂಡೇಶ್ವರಿ ದೇವಿಯನ್ನು ಹರಿಶ್ಚಂದ್ರಪುರದ ಕೆರೆಯಲ್ಲಿ ಶಾಸ್ತೊçÃಕ್ತವಾಗಿ ವಿಸರ್ಜನೆ ಮಾಡಲಾಯಿತು. ಡಿವೈಎಸ್ಪಿ ಮಹೇಶ್ ಕುಮಾರ್ ಸಮ್ಮುಖದಲ್ಲಿ ೬೦೦ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಾರ್ಯ ನಡೆಸಿದ್ದರು. ಮುಂಜಾನೆಯ ೯ ಗಂಟೆ ನಂತರ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ಬಿಡಲಾಯಿತು. ನಿರೀಕ್ಷೆಗೂ ಮೀರಿದ ಜನರು ಈ ಬಾರಿ ದಸರಾ ವೀಕ್ಷಣೆಗೆ ಆಗಮಿಸಿದ್ದರು. - ಹೆಚ್ಕೆ. ಜಗದೀಶ್