ಮಡಿಕೇರಿ, ಅ. ೩: ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರು ದಶಮಂಟಪಗಳ ಶೋಭಾಯಾತ್ರೆಯ ಸಂದರ್ಭದಲ್ಲಿ ವಿವಿಧ ಮಂಟಪಗಳು ಇದ್ದ ಸ್ಥಳಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳಿ ವೀಕ್ಷಣೆ ಮಾಡಿ ಸಮಿತಿಯವರನ್ನು ಉತ್ತೇಜಿಸಿದರು. ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರೊಂದಿಗೆ ಶಾಸಕರು ಹಿಂಬದಿ ಸವಾರರಾಗಿ ತೆರಳಿದರು. ಇನ್ನಿತರ ಹಲವರು ಒಂದೆರಡು ದ್ವಿಚÀಕ್ರ ವಾಹನದಲ್ಲಿ ಸಾಥ್ ನೀಡಿದರು. ಈ ಸಂದರ್ಭ ಶಾಸಕರು, ಎಲ್ಲಾ ಮಂಟಪಗಳಿಗೆ ತಲಾ ರೂ. ೫೦ ಸಾವಿರ ಹಾಗೂ ಕರಗ ದೇವಾಲಯದವರಿಗೆ ತಲಾ ರೂ. ೨೫ ಸಾವಿರ ಹಣ ವಿತರಿಸಿದರು.