ಮಡಿಕೇರಿ, ಅ. ೩: ಪಡುವಣದಲ್ಲಿ ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಮಂಜಿನ ನಗರಿ ಮಡಿಕೇರಿಯಲ್ಲಿ ಹೊಸಲೋಕ ಸೃಷ್ಟಿಯಾಗಿತ್ತು. ಬೆಳಕಿನ ರಂಗವಲ್ಲಿಯನ್ನು ಮೂಡಿಸಿದ ದಶಮಂಟಪ ಶೋಭಾಯಾತ್ರೆ ಕಂಡು ಜನ ಪುಳಕಿತರಾದರು. ದೇವಾನುದೇವತೆ ರಕ್ಕಸರ ನಡುವಿನ ಕಾಳಗ, ಮುಗಿಲೆತ್ತರ ಚಿಮ್ಮುತ್ತಿದ್ದ ಲೈಟಿಂಗ್ಸ್, ಆಕರ್ಷಕ ಪ್ರಭಾವಳಿಗಳ ವೈಭವವನ್ನು ಜನ ಕಣ್ತುಂಬಿಕೊAಡರು. ಆದರೆ, ಧ್ವನಿವರ್ಧಕ ಬಳಕೆಗೆ ವಿಧಿಸಿದ್ದ ಕಡಿವಾಣ ಯುವಸಮೂಹಕ್ಕೆ ನಿರಾಸೆಯನ್ನು ಉಂಟು ಮಾಡಿತು.
ಸೆ. ೨೨ರಂದು ಕರಗೋತ್ಸವದ ಮೂಲಕ ಸಾಂಪ್ರದಾಯಿಕವಾಗಿ ಮುನ್ನುಡಿ ಇಟ್ಟ ಮಡಿಕೇರಿ ದಸರಾಕ್ಕೆ ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆ ಹಾಗೂ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ತೆರೆ ಎಳೆಯಲಾಯಿತು.
ಸಂಜೆಯಾಗುತ್ತಿದAತೆ ಜಿಲ್ಲೆ ಸೇರಿದಂತೆ ಹೊರಜಿಲ್ಲೆ, ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಜನ ಮಡಿಕೇರಿ ನಗರವನ್ನು ಪ್ರವೇಶಿಸಲಾರಂಭಿಸಿದರು. ನೋಡ ನೋಡುತ್ತ ಮಡಿಕೇರಿ ನಗರ ಜನರಿಂದ ತುಂಬಿ ತುಳುಕಲಾರಂಭಿಸಿತು. ಸಂಜೆ ೫ ಗಂಟೆ ನಂತರ ನಗರಕ್ಕೆ ವಾಹನಗಳ ಪ್ರವೇಶವನ್ನು ಪೊಲೀಸರು ತಡೆಹಿಡಿದರು. ವಿವಿಧೆಡೆ ವಾಹನ ನಿಲುಗಡಗೆ ಪೊಲೀಸ್ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜ. ತಿಮ್ಮಯ್ಯ ವೃತ್ತ, ರಾಜಾಸೀಟ್ ರಸ್ತೆ, ಕೋಟೆ ಮುಂಭಾಗ, ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ವೃತ್ತ, ಚೌಕಿ ಭಾಗದಲ್ಲಿ ಜನಜಂಗುಳಿ ಕಿಕ್ಕಿರಿದು ಸೇರಿತ್ತು.
ಖಾಕಿ ಸರ್ಪಗಾವಲು : ಬೆಂಗಳೂರಿನಲ್ಲಿ ಆರ್.ಸಿ.ಬಿ. ವಿಜಯೋತ್ಸವ ಹಾಗೂ ತಮಿಳು ನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
೧೫೦೦ ಪೊಲೀಸರ ಬಿಗಿಭದ್ರತೆ ನಗರದಲ್ಲಿತ್ತು. ಮಹಿಳಾ ಸದಸ್ಯರಿರುವ ಜಂಬೋ ಟೀಂ ನಗರದಲ್ಲಿ ಸಂಚರಿಸಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿತ್ತು. ಆಯಾಕಟ್ಟಿನ ಪ್ರದೇಶ ಹಾಗೂ ಜನನಿಬಿಡ ಜಾಗದಲ್ಲಿ ಮಫ್ತಿಯಲ್ಲಿದ್ದ ಪೊಲೀಸರು ಕಂಡುಬAದರು.ಡ್ರೋನ್ ಕ್ಯಾಮರದ
(ಮೊದಲ ಪುಟದಿಂದ) ಮೂಲಕವೂ ಏರಿಯಲ್ ದೃಶ್ಯಾವಳಿಗಳನ್ನು ಪೊಲೀಸರು ಗಮನಿಸುತ್ತಿದ್ದರು. ೭೨ ಕಡೆಗಳಲ್ಲಿ ಕ್ಯಾಮರ ಅಳವಡಿಸಿ ಅದರ ಮೇಲ್ವಿಚಾರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಕಮಾಂಡ್ ಮತ್ತು ಕಂಟ್ರೋಲ್ ರೂಮ್ನಿಂದ ಮಾಡಲಾಗುತ್ತಿತ್ತು. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಹೆಲ್ಪ್ ಡೆಸ್ಕ್ಗಳು ಕಾರ್ಯನಿರ್ವಹಿಸಿದವು. ಜೊತೆಗೆ ಧ್ವನಿವರ್ಧಕ ಬಳಸಿಕೊಂಡು ಪೊಲೀಸರು ಜನರಿಗೆ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚನೆ ನೀಡುತ್ತಿದ್ದರು.