ನಾಪೋಕ್ಲು, ಅ. ೩: ಇಲ್ಲಿಗೆ ಸಮೀಪದ ನೆಲಜಿ ಮತ್ತು ಬಲ್ಲಮಾವಟಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ನೆಲಜಿ ಗ್ರಾಮದ ನಿವಾಸಿ ಚೆಟ್ಟಿಯಾರಂಡ ತನು ತಮ್ಮಯ್ಯ ಎಂಬವರ ಪುತ್ರಿ ಹರ್ಷಿಣಿ (೧೭) ಹಾಗೂ ಬಲ್ಲಮಾವಟ್ಟಿ ಗ್ರಾಮ ನಿವಾಸಿ ಮಲೆಯಂಡ ಪ್ರಶಾಂತ್ ಎಂಬವರ ಪುತ್ರ ಪ್ರತೀಕ್ ಪೊನ್ನಣ್ಣ (೧೭) ಮೃತಪಟ್ಟ ದುರ್ದೈವಿಗಳು. ಇವರು ಮೂರ್ನಾಡು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತರಾಗಿದ್ದು, ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.