ಗೋಣಿಕೊಪ್ಪಲು, ಅ.೩: ಕ್‌ಗ್ಗಟ್ಟ್ನಾಡ್ ಪ್ಲೆöÊಯಿಂಗ್ ಎಲ್ಬೋಸ್ ತಂಡ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹಾಕಿ ಟೂರ್ನಿಗೆ ಇತ್ತೀಚೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಪ್ರತಿ ತಂಡದಲ್ಲಿ ೪ ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿತ್ತು.

ಕಳೆದ ಬಾರಿ ಹಾಕಿ ಟೂರ್ನಿ ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು. ಬಾರಿ ನಡೆದ ಹಾಕಿ ಟೂರ್ನಿಯನ್ನು ದೇಶದ ಯೋಧರಿಗೆ ಅರ್ಪಣೆ ಮಾಡಲಾಯಿತು. ಅಲ್ಲದೆ ಕಾರ್ಯಕ್ರಮಕ್ಕೆ ನಿವೃತ್ತ ಯೋಧರನ್ನು ಆಹ್ವಾನಿಸಿ ಗೌರವಿಸಲಾಯಿತು. ಯೋಧರ ನಾಡು ಕೊಡಗಿನಲ್ಲಿ ಈ ಬಾರಿ ನಡೆದ ಟೂರ್ನಿಯನ್ನು ಯೋಧರಿಗೆ ಅರ್ಪಣೆ ಮಾಡಲಾಗಿದೆ. ಎಂದು ಆಯೋಜಕರು ತಿಳಿಸಿದರು. ವೇದಿಕೆಯಲ್ಲಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಅವರನ್ನು ಆಯೋಜಕರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ದಾನಿಗಳು ಸೈನಿಕರ ಪರವಾಗಿ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಲ್ ದೇಯಂಡ ಎಸ್.ಪೂವಯ್ಯ ಮಾತನಾಡಿ, ಕ್ಲಬ್ ಮಟ್ಟದಲ್ಲಿ ಹಾಕಿ ಕ್ರೀಡೆ ಕಡಿಮೆಯಾಗುತ್ತಿರುವುದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಲ್ ಕೋಟ್ರಮಾಡ ನರೇಂದ್ರ ಮಾತನಾಡಿ, ಹಾಕಿ ಕ್ರೀಡೆಗೆ ಕೊಡಗು ಜಿಲ್ಲೆಯಲ್ಲಿ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆಯ ಅವಶ್ಯಕತೆಯಿದೆ ಎಂದರು. ಗೋಣಿಕೊಪ್ಪಲುವಿನ ಲೋಪಮುದ್ರ ಆಸ್ಪತ್ರೆಯ ಮುಖ್ಯಸ್ಥರಾದ ಅಮೃತ್ ನಾಣಯ್ಯ ಮಾತನಾಡಿ ವಿವಿಧ ಕ್ರೀಡೆಗಳ ಮೈದಾನಗಳ ಪುನಶ್ಚೇತನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ವೇದಿಕೆಯಲ್ಲಿ ನಿವೃತ್ತ ಸಿಆರ್‌ಪಿಎಸ್ ಉಪ ನಿರೀಕ್ಷಕಿ ಚೋಯಮಾಡಂಡ ಪವಿತ್ರ ಸನ್ನು ಉಪಸ್ಥಿತರಿದ್ದರು.

ಕ್‌ಗ್ಗಟ್ಟ್ನಾಡ್ ಪ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಪ್ರಮುಖರಾದ ಮಾಚಿಮಾಡ ಕಾರ್ಯಪ್ಪ, ಮಲ್ಲಮಾಡ ಸನತ್, ಚಿರಿಯಪಂಡ ಪವನ್ ಬಿದ್ದಪ್ಪ, ಪೆಮ್ಮಂಡ ಧರ್ಮಜ, ಪೋರಂಗಡ ಪವನ್ ಬಿದ್ದಪ್ಪ, ಪೆಮ್ಮಂಡ ಧರ್ಮಜ, ಪೋರಂಗಡ ಪ್ರಥ್ವಿ, ಮೇಚಮಾಡ ಅಪ್ಪಚ್ಚು ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ರಾಷ್ಟಿçÃಯ ವೀಕ್ಷಣೆ ವಿವರಣೆಗಾರ ಚೆಪ್ಪುಡೀರ ಎ.ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು. ಮಳೆಯ ಸಿಂಚನದ ನಡುವೆ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾ ಪ್ರೇಮಿಗಳನ್ನು ರಂಜಿಸಿದರು.