ಕುಶಾಲನಗರ, ಅ. ೧: ಕಟ್ಟಡ ವಿನ್ಯಾಸ ನಿರ್ಮಾಣ ಬಗ್ಗೆ ಸಲಹೆ, ಮಾಹಿತಿ ನೀಡುವ ಜಿಲ್ಲಾ ಮಟ್ಟದ ಉಚಿತ ಕಾರ್ಯಗಾರ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರ ಪಿಆರ್‌ಸಿ ರೆಡಿಮೇಡ್ ಕಾಂಕ್ರೀಟ್ ಸಂಸ್ಥೆಯ ಆಶ್ರಯದಲ್ಲಿ ಕುಶಾಲನಗರ ಪಾಮ್ ಎರಾ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಗಾರವನ್ನು ಪಿಆರ್‌ಸಿ ಸಂಸ್ಥೆಯ ಮಾಲೀಕರಾದ ಪುರುಷೋತ್ತಮ ರೈ ಉದ್ಘಾಟಿಸಿದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತಜ್ಞರು ಪಾಲ್ಗೊಂಡು ಕಟ್ಟಡ ನಿರ್ಮಾಣ, ಸಲಹೆ ಜೊತೆಗೆ ತಜ್ಞ ಇಂಜಿನಿಯರ್ ಗಳಿಂದ ಅಗತ್ಯ ಸಲಹೆಗಳನ್ನು ನೀಡಲಾಯಿತು. ಉತ್ತಮ ಗುಣಮಟ್ಟದ ಮತ್ತು ಆಕರ್ಷಕ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸಲು ಬಳಸಬೇಕಾದ ಸಾಮಗ್ರಿಗಳ ಹಾಗೂ ಸ್ಥಳ ವಿನ್ಯಾಸ ಬಳಕೆ ಬಗ್ಗೆ ಅರಿವು ನೀಡಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ರಾಷ್ಟಿçÃಯ ಹಾಗೂ ಖಾಸಗಿ ಬ್ಯಾಂಕುಗಳ ಸಾಲಗಳ ಮತ್ತು ಹಣಕಾಸು ಕಲ್ಪಿಸುವ ಬಗ್ಗೆ ಮಾಹಿತಿ ಒದಗಿಸಿದರು. ತಜ್ಞ ಇಂಜಿನಿಯರ್‌ಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಸೂಕ್ತ ಸಲಹೆಗಳನ್ನು ನೀಡಿದರು.

ವಾಸ್ತು ಶಿಲ್ಪ ತಜ್ಞರಾದ ಡಾ ಚಾಂಪ್, ಮಹೇಶ್ ಕಾಮತ್, ಅನಿರ್ಧನ್ ಪಾಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳಾದ ಹೇಮಂತ್ ಅಧಿಕಾರಿ, ಸಾಹಿರ್, ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ೫೦ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.