ಮಡಿಕೇರಿ, ಅ. ೧: ಮಸ್ಕಟ್ನಲ್ಲಿ ಟೀಂ ಕೂರ್ಗ್ ಮಸ್ಕಟ್ ವತಿಯಿಂದ ೨೦೨೫ ರ ಕೈಲ್ಪೊಳ್ದ್ ಒತ್ತೋರ್ಮೆ ಕೂಟ ಸಂಭ್ರಮದಿAದ ಜರುಗಿತು.
ಕೊಡವ ಸಂಸ್ಕೃತಿ - ಜನಪದ ಕಲೆ ಪ್ರದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮುಕ್ಕಾಟಿರ ಕುಮುದ ಮಾದಪ್ಪ, ನಡಿಕೇರಿಯಂಡ ವಿನೇಶ್ ಈರಪ್ಪ ಹಾಗೂ ನಡಿಕೇರಿಯಂಡ ಯಶೋಧ ಈರಪ್ಪ, ಬುಟ್ಟಿಯಂಡ ಮಂಜು ಸುಬ್ಬಯ್ಯ ಹಾಗೂ ಬುಟ್ಟಿಯಂಡ ಜೀವಿತ ಸುಬ್ಬಯ್ಯ ಪಾಲ್ಗೊಂಡಿದ್ದರು.
ಬೊಳ್ಳೆಪAಡ ಸವಿತ ಗಣಪತಿ ಪ್ರಾರ್ಥಿಸಿ, ಮುಕ್ಕಾಟಿರ ಪೂಜಿತ್ ಚಂಗಪ್ಪ ಸ್ವಾಗತಿಸಿದರು. ನೂತನ ಸದಸ್ಯರನ್ನು ಮಣವಟ್ಟಿರ ಮೌನ ಮೊಣ್ಣಪ್ಪ ಪರಿಚಯಿಸಿದರು. ಟೀಂ ಕೂರ್ಗ್ ಮಸ್ಕಟ್ ಕುರಿತಾಗಿ ನಾಪಂಡ ಲಕ್ಷಿö್ಮ ಅಯ್ಯಪ್ಪ ವಿವರವಿತ್ತರು. ನಡಿಕೇರಿಯಂಡ ಶಹನ್ ಪೊನ್ನಮ್ಮ ನಿರೂಪಿಸಿ, ಬಾಚಮಂಡ ಲವಿನ್ ಮಂದಣ್ಣ ಅದೃಷ್ಟ ಪರೀಕ್ಷೆ ನೆರವೇರಿಸಿದರು. ಕೊಡಗು - ಕೊಡವ ಜನಾಂಗದ ಬಗ್ಗೆ ನಾಪಂಡ ಲಕ್ಷಿö್ಮ ಅಯ್ಯಪ್ಪ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಆಲೆಮಾಡ ರವ್ಯ ಕುಶಾಲಪ್ಪ ವಂದಿಸಿದರು.
ಕೊಡವ ಐನ್ಮನೆ, ಕೊಡವ ಲಿಪಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪಳಂಗಿಯAಡ ಮಧು ಮಂದಣ್ಣ ನೇತೃತ್ವದಲ್ಲಿ ತಾಲಿಪಾಟ್ ಮೂಡಿಬಂತು.
ನಾಪಂಡ ದಿನಾಲ್ ಅಯ್ಯಪ್ಪ, ಐಚಂಡ ನಿರನ್ ನಾಣಯ್ಯ, ನಾಪಂಡ ಸೋಮಣ್ಣ, ಬಾಚಮಂಡ ದುÈತ್ತಿನ್ ಅಪ್ಪಯ್ಯ, ಕೊಲ್ಲಿರ ಮುÈಧುನ್ ಮುತ್ತಣ್ಣ, ಬೊಳ್ಳೆಪಂಡ ವಿಹಾನ್ ತಿಮ್ಮಯ್ಯ ಭಾಗವಹಿಸಿದ್ದರು.
ಟೀಂ ಕೂರ್ಗ್ ಮಸ್ಕಟ್ನ ಅಧ್ಯಕ್ಷರಾಗಿ ಕನ್ನಂಬಿರ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಮುಕ್ಕಾಟಿರ ಪೂಜಿತ್ ಚಂಗಪ್ಪ, ಖಜಾಂಚಿಯಾಗಿ ಪಳಂಗಿಯAಡ ಮಧು ಮಂದಣ್ಣ, ಸದಸ್ಯರಾಗಿ ಆಲೆಮಾಡ ಕುಶಾಲಪ್ಪ, ಐಚಂಡ ನಿರನ್ ನಾಣಯ್ಯ, ಪೊನ್ನಕಚ್ಚಿರ ದಿವ್ಯ ದೇಚಮ್ಮ ಹಾಗೂ ನಡಿಕೇರಿಯಂಡ ಶಹನ್ ಪೊನ್ನಮ್ಮ ಕಾರ್ಯನಿರ್ವಹಿಸಿದರು.