ದೇಶದ ರಾಷ್ಟçಪಿತ, ಮಕ್ಕಳ ಪಾಲಿನ ಬಾಪೂಜಿ ಮೋಹನ್ ದಾಸ್ ಕರಮಚಂದ ಗಾಂಧಿ ಅವರ ಜನ್ಮದಿನವನ್ನು ಅಕ್ಟೋಬರ್ ಎರಡರಂದು ರಾಷ್ಟಿçÃಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅಂತರರಾಷ್ಟಿçÃಯ ಅಹಿಂಸಾ ದಿನವೆಂದು ೨೦೦೭ ರಿಂದ ಆಚರಿಸಲಾಗುತ್ತಿದೆ. ಸತ್ಯ ಮತ್ತು ಅಹಿಂಸೆಯ ಮೂಲಕ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಮಹಾತ್ಮ ಗಾಂಧಿಯವರು. ಯಾವ ತತ್ವ ಸಿದ್ಧಾಂತವನ್ನು ನಂಬಿದ್ದರೋ ಹಾಗೆಯೇ ಜೀವನ ನಡೆಸಿದ ಮಹಾ ನಾಯಕ. ಅವರ ಜೀವನವು ತೆರೆದ ಪುಸ್ತಕದಂತೆ ಅದರಲ್ಲಿ ಯಾವುದೇ ಮುಚ್ಚು ಮರೆಗಳು, ಅಡೆತಡೆಗಳು ಇಲ್ಲ. ಗಾಂಧೀಜಿಯವರ ಬಾಲ್ಯ ದಿನಗಳಲ್ಲಿ ರೂಢಿಸಿಕೊಂಡ ತತ್ವ ಸಿದ್ಧಾಂತಗಳು ಅವರನ್ನು ದೇಶದ ರಾಷ್ಟçಪಿತರನ್ನಾಗಿ ಮಾಡಿದ್ದು. ದೇಶದ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ಬ್ರಿಟಿಷರ ವಿರುದ್ಧ ಸತ್ಯ ಮತ್ತು ಅಹಿಂಸೆ ಎಂಬ ಎರಡು ಅಸ್ತçಗಳಿಂದಲೇ ಪರಕೀಯರನ್ನು ನಡುಗಿಸಿ ದೇಶ ಬಿಟ್ಟು ತೊಲಗುವಂತೆ ಮಾಡಿದ ಗಾಂಧೀಜಿ. ಅವರ ತತ್ವ ಆದರ್ಶಗಳು ಜಗತ್ತಿಗೆ ದಾರಿ ದೀಪವಾಗಿದೆ. ಅಂತಹ ಮಹಾನ್ ನಾಯಕನ ಅಹಿಂಸಾ ತತ್ವವನ್ನು ಇಡೀ ವಿಶ್ವವೇ ಒಪ್ಪಿಕೊಂಡು ೨೦೦೭ ರಿಂದ ಅಂತರರಾಷ್ಟಿçÃಯ ಅಹಿಂಸಾ ದಿನವನ್ನು ಆಚರಿಸಲಾಗುತ್ತಿದೆ. ದೇಶದ ಇತಿಹಾಸದ ಪುಟಗಳಲ್ಲಿ ಮೇರು ನಾಯಕನಾಗಿ ಗುರುತಿಸಿಕೊಂಡವರು ಗಾಂಧೀಜಿಯವರು. ಸ್ವಾತಂತ್ರ‍್ಯ ಹೋರಾಟದ ಮಹಾ ಯಜ್ಞಕ್ಕೆ ಸತ್ಯಾಗ್ರಹ, ವಿದೇಶಿ ವಸ್ತುಗಳ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಆಮರಣಾಂತ ಉಪವಾಸ ಹೀಗೆ ಹತ್ತು ಹಲವು ಕಠಿಣ ನಿಷ್ಠುರ ಕಾರ್ಯಗಳ ಮೂಲಕ ಸ್ವಾತಂತ್ರ‍್ಯ ಹೋರಾಟದ ಜ್ವಾಲೆಯು ಪ್ರಜ್ವಲಿಸುವಂತೆ ಮಾಡಿ ಜನರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದಂತಹ ಗಾಂಧೀಜಿಯವರ ನಾಯಕತ್ವ ಮತ್ತು ಹೋರಾಟ ಎಂದೆAದಿಗೂ ಅಜರಾಮರವಾಗಿರುತ್ತದೆ. ಗಾಂಧೀಜಿ ಸರಳ ಜೀವನ, ಅಲ್ಪಾಹಾರ, ಸ್ವಚ್ಛತೆ, ದೇಶೀಯ ವಸ್ತುಗಳ ಬಳಕೆ, ಗುಡಿ ಕೈಗಾರಿಕೆಗಳ ಸ್ಥಾಪನೆ, ವೈಜ್ಞಾನಿಕ ಮನೋಭಾವ, ಆತ್ಮಾವಲೋಕನ ಹೀಗೆ ಹತ್ತು ಹಲವು ಆದರ್ಶಗಳು, ತತ್ವಗಳು, ಹಳೇಬೇರು ಹೊಸ ಚಿಗುರು ಎಂಬAತೆ ಇಂದಿನ ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಒಕಲ್ ಫಾರ್ ಲೋಕಲ್, ನಾರಿ ಶಕ್ತಿ ಎಂಬ ಅನೇಕ ಯೋಜನೆಗಳು, ಅಭಿಯಾನಗಳು ಹೊಸ ತಲೆಬರಹಗಳೊಂದಿಗೆ ಅತ್ಯಂತ ಪ್ರಭಾವಿ ಅಸ್ತçಗಳಾಗಿ ದೇಶವನ್ನು ಪ್ರಗತಿಪತದತ್ತ ಮುನ್ನಡೆಸುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ರಾಜಕೀಯ ಸಾಮಾಜಿಕ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಗಾಂಧೀಜಿಯ ತತ್ವ ಆದರ್ಶಗಳನ್ನು ಮತ್ತಷ್ಟು ಅಳವಡಿಸಿಕೊಳ್ಳುವುದರ ಮೂಲಕ ಒಂದು ಬಲಿಷ್ಟ ಸದೃಢ ಆತ್ಮನಿರ್ಭರ ರಾಷ್ಟç ನಿರ್ಮಾಣ ಖಂಡಿತ ಸಾಧ್ಯವಾಗುತ್ತದೆ.
- ಬೆಂಜಾAಡ ರಶ್ಮಿ ದೇವಯ್ಯ,