ಗೋಣಿಕೊಪ್ಪಲು, ಸೆ.೨೧: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ತಾ.೨೭ ರಂದು ನಡೆಯಲಿರುವ ಮಹಿಳಾ ದಸರಾ ಕಾರ್ಯಕ್ರಮ ಲೋಗೋ ಬಿಡುಗಡೆ ಮಾಡಲಾಯಿತು.

ನಗರದ ಗ್ರಾಮ ಪಂಚಾಯಿತಿಯ ಹಳೆ ಸಭಾಂಗಣದಲ್ಲಿ ಲೋಗೋ ಹಾಗೂ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಬೆಳಿಗ್ಗೆ ೯ ಗಂಟೆಯಿAದ ಆರಂಭವಾಗುವ ಕಾರ್ಯಕ್ರಮದಲ್ಲಿ ಕ್ರೀಡೆ,ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ಸಂಜೆಯತನಕ ನಡೆಯಲಿವೆ ಎಂದು ಸಮಿತಿ ಅಧ್ಯಕ್ಷೆ ಎಂ. ಮಂಜುಳಾ ತಿಳಿಸಿದರು.

ಶ್ರೀ ಕಾವೇರಿ ದಸರಾ ಸಮಿತಿಯ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿಯೇ ವಿವಿಧ ಕಾರ್ಯಕ್ರಮಗಳನ್ನು ಕಾವೇರಿ ಕಲಾ ವೇದಿಕೆಯಲ್ಲಿ ಹಾಗೂ ದಸರಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭ ಮಹಿಳಾ ದಸರಾ ಸಮಿತಿಯ ಉಪಾಧ್ಯಕ್ಷೆ ಕಡೆಮಾಡ ಕುಸುಮ ಜೋಯಪ್ಪ, ಧನಲಕ್ಷಿö್ಮ, ಕಾರ್ಯದರ್ಶಿ ಸಪೂರ ಬಾನು,ಖಜಾಂಚಿ ಸುನಿತ, ಗೌ.ಅಧ್ಯಕ್ಷೆ ಚೈತ್ರ ಉಪಸ್ಥಿತರಿದ್ದರು.