ಗೋಣಿಕೊಪ್ಪಲು, ಸೆ.೨೧: ಕಾಡಾನೆಗಳ ಉಪಟಳಕ್ಕೆ ರೈತರು ಹೈರಾಣಗಿದ್ದು, ರೈತರು ಬೆಳೆದಿದ್ದ ಕಾಫಿ, ಅಡಿಕೆ, ತೆಂಗಿನ ಮರಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ.
ಕಾಡಾನೆಗಳಿAದಾಗಿ ರೈತರು ತಮ್ಮ ತೋಟಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ದು, ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮಸ್ಥರ ಕೋರಿಕೆ ಮೇರೆಗೆ ಪಾಲಂಗಾಲಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.ರೈತರ ತೋಟದಲ್ಲಿ ನಷ್ಟಗೊಂಡಿರುವ ಬೆಳೆಗಳನ್ನು ಪರಿಶೀಲಿಸಿದರು.
ಗ್ರಾಮದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಈ ಹಿಂದೆ ಮಾಡಲಾಗಿದ್ದ ಕಂದಕಗಳು ಬಹುಪಾಲು ಮುಚ್ಚಿ ಹೋಗಿರುವುದರಿಂದ ಕಾಡಾನೆಗಳು ನೇರವಾಗಿ ತೋಟಕ್ಕೆ ನುಗ್ಗಿ ಬರುತ್ತಿವೆ, ನಾಲ್ಕೆöÊದು ಕಾಡಾನೆಗಳು ಇಲ್ಲಿಯೇ ಬೀಡುಬಿಟ್ಟಿವೆ ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಸಂಕೇತ್ ಪೂವಯ್ಯ ಅವರಿಗೆ ಮನವಿ ಮಾಡಿದರು.
ಆನೆ ಕಂದಕ ದುರಸ್ತಿ ಪಡಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖವಾಗುವಂತೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಕಂದಕ ದುರಸ್ತಿ ಪೂರ್ಣಗೊಂಡ ತರುವಾಯ ಪೊನ್ನಂಪೇಟೆ ಹಾಗೂ ವೀರಾಜಪೇಟೆಯ ಅರಣ್ಯ ಸಿಬ್ಬಂದಿಗಳ ಸಹಕಾರ ಪಡೆದು ಕಾಡಾನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕೆಲಸ ಕೈಗೊಳ್ಳಲು ಸೂಚನೆ ನೀಡಿದರು.
ಗ್ರಾಮದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಪೂರಕವಾಗಿ ಕಳೆದ ಎಂಟು ತಿಂಗಳ ಹಿಂದೆ ಗ್ರಾಮಸ್ಥರ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಸೋಲಾರ್ ಬೇಲಿ ಹಾಗೂ ಹ್ಯಾಂಗಿAಗ್ ಫೆನ್ಸ್ ಅಳವಡಿಸಲು ಶಾಸಕ ಪೊನ್ನಣ್ಣ ಅನುದಾನ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಕೇತ್ ಪೂವಯ್ಯ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಭೇಟಿಯ ವೇಳೆ ಕಾಂಗ್ರೆಸ್ ಪಕ್ಷದ ಪ್ರಮುಖರಾದ ನರೇಂದ್ರ ಕಾಮತ್, ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯಂಡ ಮಹೇಶ್ ,ಪ್ರಮುಖರಾದ ಕರಿನೆರವಂಡ ಜಾಲು ಚಂಗಪ್ಪ, ಕಾರ್ಯಪ್ಪ,ಮಂಜು, ಎನ್ ಅಯ್ಯಪ್ಪ,ಜಿತನ್,ಡ್ಯಾನಿ ಕುಶಾಲಪ್ಪ,ಪೊನ್ನಣ್ಣ, ಚಾತಂಡ ಸೋಮಯ್ಯ, ಪಾಲೇಂಗಡ ಮಾಚಯ್ಯ, ಪಿ.ಎಸ್. ನರೇಂದ್ರನಾಥ್, ಮೇಚೂರ ಲೋಕೇಶ್, ಸೋಮಯ್ಯ, ಕೋಡಿರ ಪ್ರವೀಣ್ ಪೊನ್ನಣ್ಣ ಸೇರಿದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.