ಮಡಿಕೇರಿ, ಸೆ. ೨೧: ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ಜಿಲ್ಲಾ ಮಟ್ಟದ ಮುಕ್ತ ೫+೨ ಆಟಗಾರರ ಕಾಲ್ಚೆಂಡು ಪಂದ್ಯಾವಳಿ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಮಡಿಕೇರಿ ತಾಲೂಕು ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯನ್ನೂ ತಾ. ೨೩ ರಂದು ಆಯೋಜಿಸಲಾಗಿದೆ. ೧೫ ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ಮಾತ್ರ ಪಂದ್ಯಾವಳಿಗೆ ಉಚಿತ ನೋಂದಾವಣೆ ವ್ಯವಸ್ಥೆಯಿದ್ದು, ಮೊದಲ ಮೂರು ಸ್ಥಾನಗಳ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ಭಾಗವಹಿಸುವ ಶಾಲಾ ತಂಡಕ್ಕೂ ಗೌರವ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.ಶಾಲಾ ತಂಡಗಳು ದೃಢೀಕರಣ ಪತ್ರ ಅಥವಾ ವಿದ್ಯಾರ್ಥಿಗಳ ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗೆ ೭೩೩೮೫೪೭೮೯೭, ೭೦೧೯೯೦೯೪೯೫ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದೆ.