ಮಡಿಕೇರಿ, ಸೆ.೨೧: ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ತಾಯಿಯ ಕರಗವು ತಾ.೨೨ ರಂದು ಸಂಜೆ ೬ ಗಂಟೆಗೆ ಪಂಪಿನ ಕೆರೆಯಿಂದ ಹೊರಟು ಬನ್ನಿ ಮಂಟಪ, ಶ್ರೀ ಕೋದಂಡರಾಮ ದೇವಾಲಯ, ಚೌಡೇಶ್ವರಿ ದೇವಾಲಯ, ಮಹದೇವಪೇಟೆ ಕನ್ನಿಕಾ ಪರಮೇಶ್ವರಿ ದೇವಾಲಯ, ಚೌಕಿ ಮತ್ತು ಶ್ರೀಪೇಟೆ ಶ್ರೀರಾಮ ಮಂದಿರದಿAದ ಮರಳಿ ದೇವಾಲಯಕ್ಕೆ ತೆರಳಲಿದೆ.

ತಾ. ೨೩ ರಂದು ಮಧ್ಯಾಹ್ನ ದೇವಾಲಯದಿಂದ ಹೊರಟು ಚಿಕ್ಕಪೇಟೆ ಮೈಸೂರು ರಸ್ತೆ, ಶಾಂತಿನಿಕೇತನ, ಜಯನಗರ, ಅಶೋಕಪುರ, ಕೆ.ಇ.ಬಿ ವಸತಿ ಗೃಹ, ಸುದರ್ಶನ ಅತಿಥಿಗೃಹ, ಜಲಾಶಯ ಬಡಾವಣೆ, ಗುಂಡೂರಾವ್ ಕಾಂಪೌAಡ್, ಬ್ರಾಹ್ಮಣರ ಬೀದಿ, ಪುಟಾಣಿನಗರ, ದೇಚೂರು ತೆರಳಲಿದೆ.

ತಾ. ೨೪ ರಂದು ಶ್ರೀ ಮುನೇಶ್ವರ ದೇವಸ್ಥಾನ ರಸ್ತೆಯಿಂದ ಸಾಗಿ ಶ್ರೀ ಓಂಕಾರೇಶ್ವರ ದೇವಸ್ಥಾನ, ಸಿ.ವಿ.ಎಸ್. ಸ್ಕೂಲ್ ರಸ್ತೆ, ಶ್ರೀ ರಾಘವೇಂದ್ರ ದೇವಸ್ಥಾನ, ಗೌಡ ಸಮಾಜ, ದಾಸವಾಳ ರಸ್ತೆ, ರಾಣಿಪೇಟೆಗೆ ತೆರಳಲಿದೆ.

ತಾ.೨೫ ಮತ್ತು ತಾ.೨೬ ರಂದು ದೇವಾಲಯದಲ್ಲಿ ವಾರ್ಷಿಕೋತ್ಸವದ ಪೂಜೆಗಳು ಇರುವುದರಿಂದ ಈ ಎರಡು ದಿವಸ ಕರಗ ಹೊರಡುವುದಿಲ್ಲ.

ತಾ.೨೭ ರಂದು ಹೊಸ ಬಡಾವಣೆ, ರೇಸ್‌ಕೋರ್ಸ್ ರಸ್ತೆ, ಮೈತ್ರಿ ಜಂಕ್ಷನ್, ಕಾನ್ವೆಂಟ್ ಜಂಕ್ಷನ್, ಪ್ರಕೃತಿ ಬಡಾವಣೆ, ವಿನಾಯಕ ರೈಸ್‌ಮಿಲ್, ವಿನ್ಸೆಂಟ್ ಕಾಂಪೌAಡ್, ಸ್ಟಿವಟ್ ðಹಿಲ್‌ಗೆ ತೆರಳಲಿದೆ.

ತಾ. ೨೮ ರಂದು ಪೆನ್ಷನ್‌ಲೇನ್ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನ, ನಗರಸಭೆ ಹಿಂಭಾಗ ರಸ್ತೆ, ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ, ಗೌಳಿಬೀದಿ, ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಸ್ಥಾನಕ್ಕೆ ತೆರಳಲಿದೆ.

ಅ. ೧ ರಂದು ಆಯುಧ ಪೂಜೆ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಅಂದು ಬೆಳಿಗ್ಗೆ ೮.೦೦ ಗಂಟೆಯಿAದ ಸಂಜೆ ೭.೦೦ ಗಂಟೆಯವರೆಗೆ ವಾಹನ ಪೂಜೆ ನಡೆಯಲಿದೆ.

ಅ.೨ ರಂದು ವಿಜಯದಶಮಿಯಂದು ಬೆಳಿಗ್ಗೆ ಗಣಪತಿ ಹೋಮ ನಂತರ ಮಹಾಪೂಜೆ ನಡೆಯಲಿದೆ.ರಾತ್ರಿ ೧೧.೦೦ ಗಂಟೆಗೆ ಕರಗ ಪೂಜೆಯ ನಂತರ ಮುಖ್ಯ ಬೀದಿಗಳಲ್ಲಿ ಕರಗ ಹೊರಟು ಬೆಳಗ್ಗಿನ ಜಾವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಕರಗ ಪ್ರದಕ್ಷಿಣೆ ಕೊನೆಗೊಳ್ಳಲಿದೆ ಹಾಗೂ ರಾತ್ರಿ ನಗರದಲ್ಲಿ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.