ಸಿದ್ದಾಪುರ, ಸೆ. ೨೧: ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ರವರೆಗೆ ರಾಜ್ಯ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು ಈ ಸಮೀಕ್ಷೆಯಲ್ಲಿ ಹಲವಾರು ನ್ಯೂನ್ಯತೆಗಳಿದ್ದು, ಈ ನ್ಯೂನ್ಯತೆಗಳನ್ನು ಸರಿಪಡಿಸಬೇಕೆಂದು ಜಿಲ್ಲಾ ಎಸ್.ಎನ್. ಡಿ.ಪಿ. ಯೂನಿಯನ್ನ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಸ್ತುತ ಇರುವ ಜಾತಿ ಕಾಲಂನಲ್ಲಿ ಮಲಯಾಳಿ ಬಿಲ್ಲವ ಎಂಬ ಜಾತಿ ಇದ್ದು ಈ ರೀತಿ ಜಾತಿ ಇರುವುದಿಲ್ಲ ಎಂದು ತಿಳಿಸಿದ ಅವರು ನಮ್ಮ ಜನಾಂಗದವರು ತೀಯನ್ (ezhಚಿvಚಿ) ಎಂದು ನಮೂದಿಸಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ಈಗಿರುವ ಕ್ರೆöÊಸ್ತ ಧರ್ಮದ ಎದುರು ೪೬ ಹಿಂದೂ ಜಾತಿಗಳ ಹೆಸರುಗಳನ್ನು ನಮೂದಿಸಿರುವುದು ಮುಂದಿನ ದಿನಗಳಲ್ಲಿ ಸರ್ಕಾರವೇ ಮತಾಂತರಕ್ಕೆ ಪ್ರಚೋದನೆ ಕೊಟ್ಟಂತಾಗುತ್ತದೆ ಎಂದು ಆರೋಪಿಸಿದರು. ಈ ಹಿನ್ನೆಲೆ ಸರ್ಕಾರವು ಇದೀಗ ಕೈಗೊಂಡಿರುವ ಸಮೀಕ್ಷೆಯನ್ನು ಕೈಬಿಡಬೇಕೆಂದು ಲೋಕೇಶ್ ಮನವಿ ಮಾಡಿದ್ದಾರೆ. ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ತೀಯನ್ ಮತ್ತು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ ಎಂದು ನಮೂದಿಸಬೇಕೆಂದು ಮನವಿ ಮಾಡಿದ್ದಾರೆ.