ಸುಂಟಿಕೊಪ್ಪ, ಸೆ. ೨೦: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೪೨,೩೬,೩೧೮ ರೂ ಗಳ ಲಾಭಗಳಿಸಿದ್ದು ‘ಎ’ ತರಗತಿಯನ್ನು ಹೊಂದಿದೆ. ಸದಸ್ಯರಿಗೆ ಶೇ. ೧೮ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ .ಉತ್ತಪ್ಪ ಹೇಳಿದರು. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಎನ್.ಎಂ. ಉತ್ತಪ್ಪರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ೧,೬೭೦ ಮಂದಿ ಸದಸ್ಯರುಗಳಿದ್ದು, ಒಟ್ಟು ಪಾಲು ಬಂಡವಾಳ ರೂ. ೧,೨೯,೪೦,೨೩೫ ಆಗಿರುತ್ತದೆ. ೩೧-೦೩-೨೦೨೫ರಂದು ಸಂಘವು ೧೦,೮೦,೭೬,೨೯೦ ರೂ.ಗಳ ಠೇವಣಿ ಸಂಗ್ರಹಿಸಲಾಗಿದೆ. ಕಳೆದ ಬಾರಿಗಿಂತ ೧,೨೮,೪೩,೯೬೧ ಹೆಚ್ಚಿಗೆ ಠೇವಣಿ ಸಂಗ್ರವಾಗಿದೆ. ಕೆ.ಸಿ.ಸಿ. ಸಾಲ ೩೮೦ ಸದಸ್ಯರಿಗೆ ೯,೮೩೪೧,೫೦೦ ರೂ. ನೀಡಲಾಗಿದೆ.
ಈ ಪೈಕಿ ರೂ. ೯,೫೫,೧೮,೫೦೦ ಡಿ.ಸಿ..ಸಿ ಬ್ಯಾಂಕ್ನಿAದ ಹಾಗೂ ಸ್ವಂತ ಬಂಡವಾಳದಿAದ ೨೮,೨೩೦೦೦ ರೂ. ಸಾಲ ನೀಡಲಾಗಿದೆ. ಜಾಮೀನು ಸಾಲ ೩೧-೦೩-೨೦೨೫ ರವರೆಗೆ ೯೧,೯೫,೦೦೦ ರೂ. ವಿತರಿಸಲಾಗಿದೆ ಈ ಪೈಕಿ ರೂ. ೮೧,೩೯೯ ವಾಯಿದೆ ಮೀರಿದ ಸಾಲವಿದೆ ವಾಹನ ಸಾಲ ಆಭರಣ ಸಾಲ, ಗೊಬ್ಬರ ಸಾಲ, ಕೃಷಿಯೇತರ ಸಾಲ, ಮಧ್ಯಮಮಾವಧಿ ಸಾಲ, ವೇತನ ಆಧಾರಿತ ಸಾಲ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಸಂಘ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಅಧ್ಯಕ್ಷ ಎನ್.ಎಂ. ಉತ್ತಪ್ಪ ಹೇಳಿದರು.
ಸದಸ್ಯರುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವರೆಗಿನ ಮಕ್ಕಳಿಗೆ ಸಂಘದಿAದ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸಭೆಯ ಚರ್ಚೆಯಲ್ಲಿ ಕೊಪ್ಪತ್ತಂಡ ಗಣೇಶ, ಎಂಬಿ. ರಮೇಶ, ಜಾಲಿ ಸೋಮಯ್ಯ, ಪಿ.ಎಸ್. ರತೀಶ, ಎನ್.ಎಂ. ದೇವಯ್ಯ, ಮಂದೆಯAಡ ಗಣೇಶ ಹಾಗೂ ಕುಟ್ಟಂಡ ಪ್ರಕಾಶ್ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷೆ ಸಿ.ಎನ್.ಪವಿತ್ರ, ನಿರ್ದೇಶಕರುಗಳಾದ ಬಿ.ಎ ಮೊಣ್ಣಪ್ಪ, ಸಿ.ಎ. ತಮ್ಮಯ್ಯ, ಪಿ.ಪಿ. ತಿಲಕ್ಕುಮಾರ, ಎಂ.ಬಿ. ತಮ್ಮಯ್ಯ, ಕೆ.ಕೆ. ಕುಟ್ಟಪ್ಪ, ಎಂ.ಕೆ. ದೇಚಮ್ಮ, ಕೆ.ಎ. ಲತೀಫ್, ಎನ್.ಕೆ. ಭವಿನ್, ಎಂ.ಆರ್. ಗಿರೀಶ, ಹೆಚ್.ಇ. ಭೀಮಯ್ಯ, ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಕಾವೇರಪ್ಪ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರಾದ ಟಿ.ಆರ್. ಪವನ್, ಸಿಬ್ಬಂದಿಗಳಾದ ಬಿ.ಎಸ್. ಹರೀಶ, ಎಂ.ಟಿ. ಡಾಟಿ, ಜೆ. ಶಿಲ್ಪ, ಆರ್. ಮಂಜು, ಎಂ.ಪಿ. ಬೋಪಣ್ಣ, ಹೆಚ್.ಎನ್. ವಸಂತ, ಬಿ.ಕೆ. ಮಹೇಂದ್ರ ಹಾಗೂ ಶಶಿಕುಮಾರ್ ಉಪಸ್ಥಿತರಿದ್ದರು.