ಪೊನ್ನಂಪೇಟೆ, ಸೆ. ೨೦: ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ೨೦೨೫-೨೬ ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅರ್ವತ್ತೋಕ್ಕಲು ಸರ್ವದೈವತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಥ್ರೋಬಾಲ್‌ನಲ್ಲಿ ಬಾಲಕ ಮತ್ತು ಬಾಲಕಿಯರ ತಂಡ, ಟೇಬಲ್ ಟೆÀನ್ನಿಸ್‌ನಲ್ಲಿ ಬಾಲಕ ಮತ್ತು ಬಾಲಕಿಯರ ತಂಡ ಹಾಗೂ ವಾಲಿಬಾಲ್‌ನಲ್ಲಿ ಬಾಲಕಿಯರ ತಂಡ ವಿಜೇತರಾಗಿದ್ದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚೆಸ್ ಸ್ಪರ್ಧೆಯಲ್ಲಿ ಅಶ್ವಿ ಮತ್ತು ವಂದನಾ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ, ಕರಾಟೆಯಲ್ಲಿ ಐಶ್ವರ್ಯ ಮತ್ತು ರಕ್ಷನ್ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದು, ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಗೌಡ ತರಬೇತಿ ನೀಡಿದ್ದಾರೆ.