ಮಡಿಕೆÃರಿ, ಸೆ. ೨೦: ಮಡಿಕೇರಿ ನಗರದ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಶೀಘ್ರವಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸುವಂತಾಗಬೇಕೆAದು ಅಬ್ದುಲ್ ಕಲಾಂ ಬಡಾವಣೆಯ ಸೌಹಾರ್ದ ಸಮಿತಿಯ ಪದಾಧಿಕಾರಿಗಳು ಶಿಶು ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸೌಹಾರ್ದ ಸಮಿತಿಯ ಅಧ್ಯಕ್ಷರಾದ ಎಂ.ಎ. ಸಾಧು ಸಾದಿಕ್, ಉಪಾಧ್ಯಕ್ಷ ಎಂ.ಬಿ. ಕೌಸರ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ ಪ್ರಕಾಶ್ ಅವರುಗಳು ಶಿಶು ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರಸನ್ನ ಕುಮಾರ್ ಅವರನ್ನು ನಗರದ ಜಿಲ್ಲಾ ಕಚೇರಿಯಲ್ಲಿ ಭೇಟಿ ಮಾಡಿ, ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ಶೀಘ್ರವಾಗಿ ಆರಂಭಿಸುವAತೆ ಮನವಿ ಮಾಡಿದರು. ೨೦೨೨ರಲ್ಲಿ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಸಂಬAಧ ನಗರಸಭೆ ಸದಸ್ಯರಾದ ಅಮೀನ್ ಮೊಹ್ಸೀನ್ ಅವರು ಮಾಡಿದ ಮನವಿ ಮೇರೆಗೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಟ್ಟಡವನ್ನು ನಿರ್ಮಿಸಲು ನಗರಸಭೆಯು ಅನುಮತಿ ನೀಡಿತ್ತು. ಈ ವಿಚಾರದ ಕುರಿತು ಉಪನಿರ್ದೇಶಕರ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನ ಕುಮಾರ್ ಅವರು, ಅಂಗನವಾಡಿ ಕಟ್ಟಡ ನಿರ್ಮಾಣದ ಸ್ಥಳವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.