ವೀರಾಜಪೇಟೆ, ಸೆ. ೨೦: ಭಾರತೀಯ ಋಷಿಗಳು ವಿಜ್ಞಾನಿಗಳಾಗಿದ್ದರು. ಗಣಿತದಲ್ಲಿನ ಅವರ ಆಳವಾದ ಅಧ್ಯಯನ ಇಂದಿಗೂ ಕೌತುಕದ ವಿಷಯವಾಗಿದೆ ಎಂದು ವೀರಾಜಪೇಟೆಯ ವೈದ್ಯ ಡಾ. ನರಸಿಂಹನ್ ಹೇಳಿದರು.
ವೀರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ವತಿಯಿಂದ ಆಯೋಜಿಸಲಾಗಿದ್ದ ಹೊಂಬೆಳಕು-ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತ ಅತ್ಯಂತ ಸುಲಭದ ವಿಷಯ. ವಿದ್ಯಾರ್ಥಿಗಳು ಗಣಿತದ ಜೊತೆ ಆಟ ಆಡಬೇಕು. ೧೦ ಅಂಕಿಗಳ ನಡುವಿನ ಆಟದಿಂದ ಸಂಖ್ಯೆಗಳ ಮಹತ್ವ ಅರಿವಾಗುತ್ತದೆ ಎಂದರು. ಜೈನ ಮುನಿ ಕುಮುದೇಂದು ಎಂಟನೇ ಶತಮಾನದಲ್ಲಿಯೇ ಸಿರಿ ಭೂ ವಲಯ ಗ್ರಂಥ ರಚಿಸಿದ್ದಾರೆ. ಆಸಕ್ತರು ಈ ಕೃತಿಯ ಅಧ್ಯಯನ ಮಾಡಬೇಕು ಎಂದರು.
ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್ ಮಾಯಾ ಚೌಕಗಳ ಮೋಜು ವಿಷಯದ ಕುರಿತು ಉಪನ್ಯಾಸ ನೀಡಿ ಅಂಕಿ ಸಂಖ್ಯೆಗಳೊAದಿಗೆ ಆಟವಾಡುತ್ತಾ ಮಾಯಾಚೌಕಗಳನ್ನು ರಚಿಸುವುದರ ಮೂಲಕ ಗಣಿತ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ವೈವಿಧ್ಯಮಯ ಮಾಯಾಚೌಕಗಳನ್ನು ರಚಿಸುವ ವಿಧಾನವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಯಚೂರಿನ ಸ್ತಿçÃರೋಗ ತಜ್ಞ ಜಯಪ್ರಕಾಶ ಪಾಟೀಲ ಮಾತನಾಡಿ, ರಾಜಕೀಯ ಧುರೀಣರು ಇಂದು ಸಮಾಜವನ್ನು ವಿಭಜಿಸುತ್ತಿದ್ದಾರೆ.
ಸಮಾಜದಲ್ಲಿ ನಾವು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ವೈಜ್ಞಾನಿಕ ತಂತ್ರಜ್ಞಾನ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಯಾವುದೇ ಮೂಲದಲ್ಲಿ ಕ್ಷಿಪ್ರವಾಗಿ ದೊರಕುವ ಮಾಹಿತಿಯನ್ನು ಒಪ್ಪಿಕೊಳ್ಳಬಾರದು. ಮಾಹಿತಿಗಳು ಸರಿಯೇ ತಪ್ಪೇ ಎಂದು ವಿಮರ್ಶಿಸುವ ಜ್ಞಾನ ನಮ್ಮಲ್ಲಿರಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದರು.
ಹೊAಬೆಳಕು ಕಾರ್ಯಕ್ರಮದ ಸಾನಿಧ್ಯವನ್ನು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು.