ನಾಪೋಕ್ಲು, ಸೆ. ೧೮: ಇಲ್ಲಿಯ ಸುನ್ನಿ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಇಂದಿನಿAದ ಮೂರು ದಿನ ಆಯೋಜಿಸಿರುವ “ಮದದೇ ಮದೀನ” ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಧ್ವಜಾರೋಹಣವನ್ನು ಮಸೀದಿ ಆವರಣದಲ್ಲಿ ನೆರವೇರಿಸಲಾಯಿತು.

ನಮಾಜ್ ನಂತರ ಜಮಾಅತ್ ಅಧ್ಯಕ್ಷರಾದ ಎಂ.ಹೆಚ್. ಅಬ್ದುಲ್ ರೆಹಮಾನ್ ಅವರು ಧ್ವಜಾರೋಹನವನ್ನು ನೆರವೇರಿಸಿ, ಖತೀಬರಾದ ಹಾಫಿಳ್ ಶೌಕತಲಿ ಪ್ರಾರ್ಥನೆಯನ್ನು ನೆರವೇರಿಸಿದರು .

ಈ ಸಂದರ್ಭ ಕೆ.ಎ. ಇಸ್ಮಾಯಿಲ್, ಮನ್ಸೂರ್ ಆಲಿ ಪಿ.ಎ, ಯುನಸ್ ಪಿ.ಎಂ, ಅಬ್ದುಲ್ ಅಜೀಜ್ ಪಿ. ಎಂ. ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಸಲೀಂ ಹ್ಯಾರಿಸ್, ಶಂಸು ಕಾರೆಕಾಡು, ಅರಾಫತ್ ಪಿ. ಎಂ, ಹಸೈನಾರ್ ತಿರೋವತ್, ಹಮೀದ್ ಸಿ.ಎಚ್, ಜಬ್ಬರ್, ಆಸಿಫ್ ಆಲಿ, ಫಾರೂಕ್, ನೌಫಲ್, ಅಬೂಬಕರ್ ಎಂ.ಎA, ಅಶ್ರಫ್ ಅಲಿ, ಬಜರುದ್ದೀನ್ ಪಿಎಂ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದು ಮಾತನಾಡಿದರು.

ಮೌಲಿದ್ ಬುರ್ದು, ದಫ್ ಮತ್ತು ಧಾರ್ಮಿಕ ಪ್ರಭಾಷಣ ಸಮಾರಂಭ ಮಿಲಾದ್ ಸಮಿತಿಯ ಅಧ್ಯಕ್ಷರಾದ ಅರಾಫತ್ ಪಿ.ಎಂ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇಲ್ಲಿಯ ಖತೀಬ್ ಖಲೀಲ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಭಾಷಣವನ್ನು ಖತೀಬರಾದ ಹಾಫಿಳ್ ಶೌಕತಲಿ ಸಖಾಫಿ ನೆರವೇರಿಸಿ ದುಅ ಮಜ್ಲೇಸ್ ನೇತೃತ್ವವನ್ನು ಸೈಯದ್ ಶಿಹಾಬುದ್ದೀನ್ ಅಲ್ ಅಹ್ಹಲ್ ಮುತನೂರ್ ತಂಗಳ್ ವಹಿಸಿದ್ದು, ಗಣ್ಯರು ಉಪಸ್ಥಿತರಿದ್ದರು.