ಮದೆನಾಡು, ಸೆ. ೧೮ : ನಿನ್ನೆ ದೇವರಕೊಲ್ಲಿ ಬಳಿ ಪೊಲೀಸರ ಕಣ್ತಪ್ಪಿಸಿ ಪತ್ನಿಯೊಂದಿಗೆ ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಪತ್ನಿ ಇಂದು ಪತ್ತೆಯಾಗಿದ್ದು ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಪಾಲಕ್ಕಾಡ್‌ನಲ್ಲಿ ದರೋಡೆ ಹಾಗೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಯುವಕ ಕಣ್ಣೂರಿನ ಆಸಿಫ್ (೨೪) ಎಂಬಾತ ತನ್ನ ಪತ್ನಿ ಮಿಶ್ರಿತ (೨೨) ಎಂಬಾಕೆಯೊAದಿಗೆ ಜೀಪ್‌ನಲ್ಲಿ ಆಗಮಿಸಿ ನಿನ್ನೆ ಸಂಜೆ ದೇವರಕೊಲ್ಲಿ ಬಳಿ ಕಾರನ್ನು ಬಿಟ್ಟು ಪೊಲೀಸರ ಕಣ್ತಪ್ಪಿಸಿ ಕಾಡಿನಲ್ಲಿ ಪರಾಗಿಯಾಗಿದ್ದರು. ಇಂದು ಸಂಜೆ ಕಾಡಿನಿಂದ ದೇವರಕೊಲ್ಲಿ ರಬ್ಬರ್ ಎಸ್ಟೇಟ್‌ನ ಮನೆಯೊಂದರ ಬಳಿ ನೀರು ಕುಡಿಯಲೆಂದು ಆಗಮಿಸಿದ ಸಂದರ್ಭ ಅವರಿಬ್ಬರನ್ನು ಸ್ಥಳೀಯರು ಹಿಡಿದು ¸ಂಪಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿನ್ನೆ ಸಂಜೆ ತಪ್ಪಿಸಿಕೊಂಡ ಇವರುಗಳಿಗಾಗಿ ಕೇರಳ ಪೊಲೀಸರು ರಾತ್ರಿಯಿಡಿ ದೇವರಕೊಲ್ಲಿಯಲ್ಲಿ ಬೀಡುಬಿಟ್ಟಿದ್ದರು. ಇಂದು ಬೆಳಿಗ್ಗೆ ಗ್ರಾಮಸ್ಥರ ೭ನೇ ಪುಟಕ್ಕೆ ಸಹಾಯದಿಂದ ಹುಡುಕಾಟ ನಡೆಸಿದರೂ ಇವರುಗಳು ಸಿಗದ ಕಾರಣ ಕೇರಳಕ್ಕೆ ಹಿಂತಿರುಗಿದ್ದರು. ಈ ನಡುವೆ ಆಸಿಫ್ ಮತ್ತು ಮಿಶ್ರಿತ ಕೇರಳದಿಂದ ಬಾಡಿಗೆಗೆ ಪಡೆದುಕೊಂಡು ಬಂದು ನಿನ್ನೆ ಸಂಜೆ ಬಿಟ್ಟು ಹೋಗಿದ್ದ ಮಹಿಂದ್ರಾ ಥಾರ್ ವಾಹನವನ್ನು ಅದರ ಮಾಲೀಕರು ತೆಗೆದುಕೊಂಡು ಹೋಗಿದ್ದಾರೆ. ಆಸಿಫ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆತನನ್ನು ಕೇರಳ ಪೊಲೀಸರು ಆಗಮಿಸಿ ಬಂಧಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಮಿಶ್ರಿತಳ ಪಾತ್ರ ಇಲ್ಲ ಎಂದು ಪೊಲೀಸರು ಖಚಿತಪಡಿಸಿದ್ದು ಆಕೆಯನ್ನು ಆಕೆಯ ಸಹೋದರನೊಂದಿಗೆ ಕಳುಹಿಸಿದ್ದಾರೆ.
-ಇಬ್ರಾಹಿಂ/ಕೃಷ್ಣ ಸುದ್ದಿಬಿಡುಗಡೆ