ಕಣಿವೆ, ಸೆ. ೧೮: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿರುವ ಸಹಕಾರ ದವಸ ಭಂಡಾರದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ದವಸ ಭಂಡಾರದ ಅಧ್ಯಕ್ಷ ವಾಲ್ನೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಬಂದ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ. ೧೫ ರಷ್ಟು ಡಿವಿಡೆಂಟ್ ನೀಡಲಾಯಿತು. ಸಂಘದ ಅತ್ಯುತ್ತಮ ಕಾರ್ಯಚಟುವಟಿಕೆಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ಸಂಘಕ್ಕೆ ತೃತೀಯ ಬಹುಮಾನ ದೊರೆತಿದೆ.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಎನ್. ರಾಮಪ್ಪ, ಸದಸ್ಯರಾದ ಎಸ್.ಸಿ. ಸುರೇಶ, ಡಿ.ಎಲ್. ಮಹೇಶ್‌ಚಂದ್ರ, ಎ.ಡಿ. ದರ್ಶನ್, ಎ.ಯು. ಅಯ್ಯಪ್ಪ, ಪಿ.ಪಿ. ಕಿರಣ್, ಎಚ್.ಎನ್. ಕೃಷ್ಣಪ್ಪ, ಎಚ್.ಎನ್. ಕಮಲಮ್ಮ, ಟಿ.ವಿ. ರುದ್ರಮ್ಮ ಮತ್ತು ಕಾರ್ಯದರ್ಶಿ ಬಿ.ಆರ್. ಚಿತ್ರ ಹಾಗೂ ಸದಸ್ಯರುಗಳಿದ್ದರು.

ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.