ಮಡಿಕೇರಿ, ಸೆ. ೧೮: ಪೋಷಣ್ ಮಾಸಾಚರಣೆ ಅಂಗವಾಗಿ ತಾವೂರು-೧ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಪೋಷಣ್ ಕುರಿತು ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಸೀಮಂತ ಕಾರ್ಯಕ್ರಮವನ್ನು ನಡೆಸಿ ಗರ್ಭಿಣಿ ಹಾಗೂ ಅವರ ಕುಟುಂಬದವರಿಗೆ ಸಮುದಾಯದವರಿಗೆ ಗರ್ಭಾವಸ್ಥೆ ಮತ್ತು ಶೈಶವ್ಯವಸ್ಥೆಯಲ್ಲಿ ಪೌಷ್ಟಿಕ ಆಹಾರದ ಮಹತ್ವ ಮತ್ತು ಮಗುವಿನ ಸಾವಿರ ದಿನಗಳ ಪ್ರಾಮುಖ್ಯತೆ, ಕಡಿಮೆ ತೂಕದ ಜನನ ಮಕ್ಕಳ ಮರಣ ತಡೆಗಟ್ಟುವಲ್ಲಿ ಪೌಷ್ಟಿಕ ಆಹಾರದ ಸೇವನೆಯ ಮಹತ್ವ ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಮತ್ತು ಪೋಷಕರ ಹೆಸರಿನಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡುವುದರೊಂದಿಗೆ ಮನೆಗಳಲ್ಲಿ ಪೌಷ್ಟಿಕ ಕೈತೋಟ ಮಾಡಲು ಪ್ರೋತ್ಸಾಹಿಸಿದರು. ಸ್ತಿçà ಶಕ್ತಿ ಗುಂಪಿನವರು ಮತ್ತು ಗ್ರಾಮಸ್ಥರಿಗೆ ಪೌಷ್ಟಿಕ ಆಹಾರದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮಿತಾ, ಸಹಾಯಕಿ ರೋಹಿಣಿ, ಆಶಾ ಕಾರ್ಯಕರ್ತೆ ಶೈಲಜಾ, ಕೋಕಿಲ ಸ್ತಿçÃಶಕ್ತಿ ಗುಂಪು, ಮೈತ್ರಿ ಶ್ರೀಶಕ್ತಿ ಗುಂಪು, ಭಾಗ್ಯಲಕ್ಷ್ಮಿ ಶ್ರೀಶಕ್ತಿ ಗುಂಪಿನ ಸದಸ್ಯರುಗಳು ಪಾಲ್ಗೊಂಡಿದ್ದರು.