ಚೆಯ್ಯಂಡಾಣೆ, ಸೆ. ೧೮: ಈದ್ ಮಿಲಾದ್ ಹಬ್ಬವನ್ನು ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಸಮಿತಿ ವತಿಯಿಂದ ದುಬೈನಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ದುಬೈನಲ್ಲಿರುವ ಅಬ್ರಾ ಕ್ರೀಕ್ ಕ್ರೂಸರ್‌ನಲ್ಲಿ ಸಮಿತಿಯ ಅಧ್ಯಕ್ಷರಾದ ಶಾಫಿ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಹಾಫಿಜ್ ರಫೀಕ್ ಉಸ್ತಾದ್ ಅವರ ನೇತೃತ್ವದಲ್ಲಿ ನಡೆದ ಮೌಲೂದ್ ಪಾರಾಯಣದೊಂದಿಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಉಮರ್ ದಾರಿಮಿ, ಸ್ವಾಬಿರ್ ಸಖಾಫಿ ಹಾಗೂ ಕೆ.ವೈ. ರಿಯಾಝ್ ಅವರು ಮಾತನಾಡಿ, ಸಮುದಾಯದ ಏಕತೆ ಸಹಕಾರ ಹಾಗೂ ಧಾರ್ಮಿಕ ಸಾಮಾಜಿಕ ಮೌಲ್ಯಗಳ ಕುರಿತು ಪ್ರೇರಣದಾಯಕ ಸಂದೇಶಗಳನ್ನು ನೀಡಿದರು. ಕಾರ್ಯಕ್ರಮದ ಅಂಗವಾಗಿ ದಫ್ ಪ್ರದರ್ಶನ, ಭಾಷಣ, ಹಾಡು, ಬುರ್ದಾ ಅಲಾಪನೆ ಮತ್ತಿತರ ಕಾರ್ಯಕ್ರಮ ನಡೆಯಿತು. ಪ್ರಧಾನ ಕಾರ್ಯದರ್ಶಿ ಎ.ಎಚ್. ಇರ್ಷಾದ್ ಸ್ವಾಗತಿಸಿ ರಜಾಕ್ ಎ.ಇ. ವಂದಿಸಿದರು.