*ಗೋಣಿಕೊಪ್ಪ, ಸೆ. ೧೮: ಹಾತೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಹಾತೂರು ವನಭದ್ರಕಾಳಿ ದೇವಸ್ಥಾನ ಆಡಳಿತ ಮಂಡಳಿಯಿAದ ಧ್ವನಿವರ್ದಕ ನೀಡಲಾಯಿತು. ಸುಮಾರು ೬೦ ಸಾವಿರ ಮೌಲ್ಯದ ಮೈಕ್‌ಸೆಟ್ಟನ್ನು ಶಾಲೆಯ ಕಾರ್ಯಕ್ರಮಗಳ ಬಳಕೆಗೆ ವಿತರಿಸಲಾಯಿತು.
ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಮೈಕ್‌ಸೆಟ್ಟನ್ನು ಮುಖ್ಯೋಪಾಧ್ಯಾಯರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಸ್ತಾಂತರಿಸಿದರು.