ಸುಂಟಿಕೊಪ್ಪ, ಸೆ. ೧೭: ಸುಂಟಿಕೊಪ್ಪ ಮಲಯಾಳಿ ಸಮಾಜದಿಂದ ೧೮ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ತಾ. ೨೧ ರಂದು ಜಿಲ್ಲಾ ಮಟ್ಟದ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸುಂಟಿಕೊಪ್ಪ ಮಲಯಾಳಿ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.
ತಾ. ೨೯ ರಂದು ಸ್ಥಳೀಯ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಓಣಂ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸ್ಪರ್ಧೆಗಳು, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಓಣಂ ಸದ್ಯ ಹಾಗೂ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಘೋಷಯಾತ್ರೆಯನ್ನು ಆಯೋಜಿಸಲಾಗಿದೆ.
ವಿಶೇಷವಾಗಿ ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ. ೧೫,೦೦೦ ಮತ್ತು ದ್ವಿತೀಯ ಬಹುಮಾನ ರೂ. ೧೦,೦೦೦ ನಗದು ಹಾಗೂ ಆಕರ್ಷಕ ಓಣಂ ಟ್ರೋಫಿ ನೀಡಲಾಗುವುದು. ಹಾಗೆಯೇ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ೧೦,೦೦೦ ಮತ್ತು ದ್ವಿತೀಯ ಬಹುಮಾನ ರೂ. ೭,೦೦೦ ನೀಡಲಾಗುವುದು.
ತಂಡಗಳ ನೋಂದಣಿಗೆ ತಾ. ೧೮ ಕೊನೆಯ ದಿನವಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ೨೦೨೪-೨೫ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಾ. ೨೧ ರೊಳಗೆ ಸಮಿತಿಗೆ ತಲುಪಿಸಲು ಕೋರಲಾಗಿದೆ ಎಂದು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ರಮೇಶ್ ಪಿಳ್ಳೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅನಿಲ್‌ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ರಮೇಶ್ ರಮೇಶ್ ಪಿಳ್ಳೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್ ಅವರ ದೂರವಾಣಿ ಸಂಖ್ಯೆ ೯೯೧೬೭೨೨೬೪೬೮ ಮತ್ತು ೯೮೪೫೦೨೮೯೧೮ ಸಂಪರ್ಕಿಸಲು ಕೋರಿದೆ.