ಮಡಿಕೇರಿ, ಸೆ. ೧೭: ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು.

೪೦೫ ಸದಸ್ಯರನ್ನು ಹೊಂದಿದ್ದು, ರೂ. ೧.೭೧ ಕೋಟಿ ಷೇರು ಬಂಡವಾಳ ಹೊಂದಿರುವ ಸಂಸ್ಥೆಯಿAದ ವಾರ್ಷಿಕ ಸಾಲಿನಲ್ಲಿ ರೂ. ೧.೮೦ ಕೋಟಿ ಸಾಲ ವಿತರಿಸಲಾಗಿದ್ದು, ಈ ಬಾರಿ ರೂ. ೧೩.೧೩ ಲಕ್ಷ ಲಾಭ ದೊರೆತಿದೆ, ಸದಸ್ಯರಿಗೆ ಶೇ. ೪.೫ರಷ್ಟು ಡಿವಿಡೆಂಡ್ ವಿತರಿಸಲಾಗಿದೆ.

ಸಭೆಯಲ್ಲಿ ಈ ಬಾರಿ ಹಲವು ವರ್ಷಗಳಿಂದ ವ್ಯಾಪಾರದಲ್ಲಿ ಸಾಧನೆ ಮಾಡಿರುವ ಮಡಿಕೇರಿಯ ಪಾಲೆಕಂಡ ಎಂ. ಮೇದಪ್ಪ, ವೀರಾಜಪೇಟೆಯ ಮಾಳೇಟಿರ ಕಾವೇರಿಯಪ್ಪ, ಗೋಣಿಕೊಪ್ಪಲುವಿನ ಪೊನ್ನಿಮಾಡ ಎಸ್. ಸುರೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಕರ್ತಚ್ಚಿರ ಬೋಪಣ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಮಿನ್ನಂಡ ರಾಮಪ್ಪ, ಕಾರ್ಯನಿರ್ವಹಣಾಧಿಕಾರಿ ಬಲ್ಯಂಡ ಅರುಣ್ ಪೊನ್ನಪ್ಪ, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.