ಮಡಿಕೇರಿ, ಸೆ,೧೬: ಮಡಿಕೇರಿಯ ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಹಾಗೂ ಇಕ್ಷಾ ಕಣ್ಣಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಇಕ್ಷಾ ಆಸ್ಪತ್ರೆಯ ವೈದ್ಯರಾದ ಡಾ. ಚಿಣ್ಣಪ್ಪ ಹಾಗೂ ಡಾ. ಗುರುಪ್ರಸಾದ್ ಒಟ್ಟು ೧೪೬ ಫಲಾನುಭವಿಗಳ ನೇತ್ರ ತಪಾಸಣೆ ನಡೆಸಿದರು.
ಸಭಾ ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಕೆ.ಎನ್ ಗಜಾನನ, ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷರಾದ ಡಿ.ಎ ಜಗದೀಶ್, ದಶಮಂಟಪ ಅಧ್ಯಕ್ಷರಾದ ಕೋಟೆ ಮಹಾ ಗಣಪತಿ ದಸರಾ ಸಮಿತಿಯ ಬಿ.ಎಂ. ಹರೀಶ್, ನಗರ ದಸರಾ ಕಾರ್ಯಾಧ್ಯಕ್ಷರಾದ ಬಿ.ಕೆ ಅರುಣ್ ಕುಮಾರ್, ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಗೌರವಾಧ್ಯಕ್ಷರಾದ ಡಿ.ಕೆ ಮೋಹನ್, ಕೆ.ಪಿ ರಾಜ, ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಪದ್ಮಾಕ್ಷಿ ಮೋಹನ್ ಹಾಗೂ ಶಶಿಕಲಾ ಲೋಕೇಶ್ ಭಾಗವಹಿಸಿದ್ದರು.
ವೈದ್ಯರಾದ ಡಾ. ಚಿಣ್ಣಪ್ಪ ಅವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು. ಮಕ್ಕಳು ಮೊಬೈಲ್ ಫೋನ್ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ದಸರಾ ಕಾರ್ಯಾಧ್ಯಕ್ಷರಾದ ಬಿ.ಕೆ ಅರುಣ್ ಕುಮಾರ್ ಅವರು ಮಾತನಾಡಿ, ಬಾಲಕ ಭಕ್ತ ಮಂಡಳಿಯವರು ಮಂಟಪ ಮಾಡಿ ಜನಮೆಚ್ಚುಗೆ ಗಳಿಸುವುದಲ್ಲದೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಉಳಿದ ಮಂಟಪ ಸಮಿತಿಗಳಿಗೆ ಮಾದರಿ ಎಂದರು.
ಕಾರ್ಯಕ್ರಮದ ನಿರೂಪಣೆ ಮಾಡಿದ ಮೂರ್ನಾಡಿನ ರಂಜಿತ್ ಅವರು ಬಾಲಕ ಭಕ್ತ ಮಂಡಳಿಯವರು ೨೦೨೨ ಸಾಲಿನಲ್ಲಿ ನಡೆಸಿದ ರಕ್ತದಾನ ಶಿಬಿರ ಮತ್ತು ೨೦೧೮ ರಲ್ಲಿ ಸಂಭವಿಸಿದ ಜಲಪ್ರಳಯದ ಸಮಂiಸೋಮವಾರಪೇಟೆ,ಸೆ.೧೬: ಮಲೆನಾಡಿನ ಹಲವಷ್ಟು ಗ್ರಾಮಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಶ್ರೀ ಸಬ್ಬಮ್ಮ ತಾಯಿ ಸುಗ್ಗಿ ಉತ್ಸವಕ್ಕೆ ಮುಖ್ಯ ವೇದಿಕೆಯಾಗಿರುವ ಸುಗ್ಗಿಕಟ್ಟೆಗಳ ಕಾಯಕಲ್ಪಕ್ಕೆ ಶಾಸಕ ಡಾ. ಮಂತರ್ ಗೌಡ ಅನುದಾನ ಒದಗಿಸುತ್ತಿದ್ದಾರೆ.
ಈ ಹಿಂದೆ ಸುಗ್ಗಿಕಟ್ಟೆಗಳಿಗೆ ಭೇಟಿ ನೀಡಿದ್ದ ಸಂದರ್ಭ ಗ್ರಾಮಸ್ಥರು ಸುಗ್ಗಿಕಟ್ಟೆಗಳ ಕಾಯಕಲ್ಪಕ್ಕೆ ಬೇಡಿಕೆ ಮುಂದಿರಿಸಿದ್ದರು. ತಾಲೂಕಿನ ಮಲೆನಾಡು ಭಾಗದ ಹಲವಷ್ಟು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಮಂತರ್ ಗೌಡ ಅವರು, ಶಾಸಕರ ನಿಧಿಯಿಂದ ತಲಾ ೧೦ ಲಕ್ಷ ರೂಪಾಯಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇಷ್ಟೇ ಅಲ್ಲದೇ ಮುಂದಿನ ಸುಗ್ಗಿ ಉತ್ಸವದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬAಧಿಸಿದ ಅಭಿಯಂತರರಿಗೆ ಸೂಚನೆಯನ್ನೂ ನೀಡಿದ್ದಾರೆ.
ಪಟ್ಟಣ ಸಮೀಪದ ಚೌಡ್ಲು ಗ್ರಾಮದ ಸುಗ್ಗಿಕಟ್ಟೆಗೆ ಭೇಟಿ ನೀಡಿದ ಶಾಸಕರು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಈ ಹಿಂದೆ ನಡೆದ ಸುಗ್ಗಿ ಉತ್ಸವಕ್ಕೆ ಆಗಮಿಸಿದ್ದ ಸಂದರ್ಭ ಕಾಯಕಲ್ಪಕ್ಕೆ ಬೇಡಿಕೆ ಇಟ್ಟಿದ್ದರಿಂದ ಇದೀಗ ಅನುದಾನ ಒದಗಿಸಲಾಗುತ್ತಿದೆ. ದೇವಾಲಯದ ಮೂಲಸ್ವರೂಪ, ಸಂಪ್ರದಾಯಗಳಿಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಚೌಡ್ಲು ಸುಗ್ಗಿಕಟ್ಟೆಯ ಸುತ್ತಲೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ, ನೆಲಕ್ಕೆ ಇಂಟರ್ ಲಾಕ್ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ ಶಾಸಕರು, ತಮ್ಮ ಶಾಸಕರ ನಿಧಿಯಿಂದ ರೂ. ೧೦ ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿದರು.
ಇದರೊಂದಿಗೆ ಗ್ರಾಮದ ಈಶ್ವರ ಹಾಗೂ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯಗಳ ಅಭಿವೃದ್ಧಿಗೆ ತಲಾ ೫ ಲಕ್ಷದಂತೆ ಒಟ್ಟು ೧೦ ಲಕ್ಷ ಅನುದಾನ ನೀಡುವುದಾಗಿ ಇದೇ ಸಂದರ್ಭ ಭರವಸೆ ನೀಡಿದರು. ಪಟ್ಟಣದ ಚನ್ನಬಸಪ್ಪ ಸಭಾಂಗಣದಿAದ ಚೌಡ್ಲು ಗ್ರಾಮ ಸಂಪರ್ಕ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಈಗಾಗಲೇ ೫೦ ಲಕ್ಷ ಅನುದಾನ ನೀಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಗ್ರಾಮಾಧ್ಯಕ್ಷ ಬನ್ನಳ್ಳಿ ಸತೀಶ್ ಮಾತನಾಡಿ, ಗ್ರಾಮದ ಸಮುದಾಯ ಭವನದ ಅಡುಗೆ ಮನೆ, ತಡೆಗೋಡೆ, ಚೌಡ್ಲು-ಕಲ್ಕಂದೂರು ಸಂಪರ್ಕ ರಸ್ತೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದರು. ರಸ್ತೆಗಳ ಅಭಿವೃದ್ಧಿಗೆ ಶೀಘ್ರವೇ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸುಗ್ಗಿಕಟ್ಟೆಗಳಿಗೆ ಕಾಯಕಲ್ಪ ನೀಡುವ ಸಂದರ್ಭ ವಾರದೊಳಗೆ ಯೋಜನಾ ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸುವAತೆ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಮೂರ್ತಿ ಅವರಿಗೆ ಶಾಸಕ ಡಾ. ಮಂತರ್ ಗೌಡ ಸೂಚಿಸಿದರು. ಈ ಸಂದರ್ಭ ಪ್ರಮುಖರಾದ ಚೇತನ್, ಸಿ.ಬಿ. ದಿನೇಶ್, ಮಂಜುನಾಥ್, ಬನ್ನಳ್ಳಿ ವಿರೂಪಾಕ್ಷ, ಸಿ.ಹೆಚ್. ಮೋಹನ್, ರಾಮಣ್ಣ, ಬನ್ನಳ್ಳಿ ಗೋಪಾಲ್, ಯೋಗೇಂದ್ರ, ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಕಾಂಗ್ರೆಸ್ ಶಿಕ್ಷಕರ ಘಟಕದ ಅಧ್ಯಕ್ಷ ಸೋಮಶೇಖರ್, ಕಿರಣ್ ಉದಯ್ಶಂಕರ್, ಗ್ರಾ.ಪಂ. ಸದಸ್ಯ ಎಸ್.ಐ. ಚೇತನ್ ಸೇರಿದಂತೆ ಇತರರು ಇದ್ದರು.
ನಂತರ ಹಾನಗಲ್ಲು ಶೆಟ್ಟಳ್ಳಿ ಸುಗ್ಗಿ ಕಟ್ಟೆಗೆ ಭೇಟಿ ನೀಡಿದ ಶಾಸಕರು, ಶ್ರೀ ಸಬ್ಬಮ್ಮ ದೇವರ ಸುಗ್ಗಿ ಬನದ ಅಭಿವೃದ್ಧಿಗೆ ೧೦ ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮ ಸಮಿತಿ ಅಧ್ಯಕ್ಷ ಉಲ್ಲಾಸ್ ಮಾತನಾಡಿ, ಅಪ್ಪನಗದ್ದೆ ಹೋಂ ಸ್ಟೇಯಿಂದ ಕಸವಿಲೇವಾರಿ ಘಟಕದ ರಸ್ತೆ, ಮುಖ್ಯರಸ್ತೆಯಿಂದ ಡಿ.ಪಿ. ಸುರೇಶ್ ಮನೆ ಸಮೀಪ ಮುಖ್ಯರಸ್ತೆಗೆ ತಡೆಗೋಡೆ, ಬಾವಿಯಿಂದ ಜಯರಾಂ ಮನೆ ಸಂಪರ್ಕದ ರಸ್ತೆ, ಹಾನಗಲ್ಲು ಶೆಟ್ಟಳ್ಳಿ-ಚಂದನಮಕ್ಕಿ ರಸ್ತೆಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಪ್ರಮುಖರಾದ ಹೆಚ್.ಆರ್. ಸುರೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್, ಶಾಂತಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಈ. ಜಯೇಂದ್ರ, ಗ್ರಾ.ಪಂ. ಸದಸ್ಯೆ ಸುಶೀಲ, ಉಷಾ ಹರೀಶ್, ಚೌಡ್ಲು ವಿಎಸ್ಎಸ್ಎನ್ನ ಜಾನಕಿ ವೆಂಕಟೇಶ್, ಗ್ರಾಮದ ಮುಖಂಡರಾದ ಶೋಭರಾಜ್, ಸುರೇಶ್, ಚಂದ್ರಶೇಖರ್, ಪೊನ್ನಪ್ಪ, ವಿಠಲ್, ದಿನೇಶ್ ಸೇರಿದಂತೆ ಇತರರು ಇದ್ದರು. ನಂತರ ತಲ್ತರೆ ಶೆಟ್ಟಳ್ಳಿ ಸುಗ್ಗಿಕಟ್ಟೆ, ಕುಮಾರಳ್ಳಿ, ನಗರಳ್ಳಿ, ತೋಳೂರುಶೆಟ್ಟಳ್ಳಿ ಸುಗ್ಗಿ ಕಟ್ಟೆಗಳಿಗೆ ಭೇಟಿ ನೀಡಿ, ಸ್ಥಳೀಯರಿಂದ ಅಹವಾಲು ಆಲಿಸಿದರು. ಸುಗ್ಗಿಕಟ್ಟೆಗಳಿಗೆ ಅನುದಾನ ಒದಗಿಸುತ್ತಿದ್ದು, ಗ್ರಾಮಸ್ಥರ ಅನುಕೂಲತೆಗಳಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿಕೊಳ್ಳುವಂತೆ ಸೂಚಿಸಿದರು.
ÀÄದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಿದ್ದನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಬಾಲಕ ಭಕ್ತ ಮಂಡಳಿಯ ಸದಸ್ಯರು ಹಾಗೂ ಇಕ್ಷಾ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.