ಮಡಿಕೇರಿ, ಸೆ.೧೬: ನೆರೆರಾಜ್ಯ ಕೇರಳದಲ್ಲಿ, ಅಮೀಬಾ ಸೂಕ್ಷಾö್ಮಣು ಜೀವಿಯೊಂದರಿAದ ಉದ್ಭವಿಸುವ ಸೋಂಕಿಗೆ ಕಳೆದ ೯ ತಿಂಗಳ ಕಾಲಾವಧಿಯಲ್ಲಿ ೧೮ ಮಂದಿ ಪ್ರಾಣ ಕಳೆದುಕೊಂಡಿದ್ದು, ಕಳೆದ ಒಂದು ತಿಂಗಳಲ್ಲೇ ೮ ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.

ಈ ಜೀವಿಯು ನೇರವಾಗಿ ಮೆದುಳಿನೊಳಗೆ ನುಸುಳಿ ನರಗಳನ್ನೇ ತಿಂದುಹಾಕುವ ಸಾಮರ್ಥ್ಯ ಹೊಂದಿದ್ದು, ಆ್ಯಂಟಿಫAಗಲ್ ಔಷಧಿಗಳನ್ನು ನೀಡುವುದೊಂದೇ ಇದಕ್ಕೆ ಚಿಕಿತ್ಸೆಯಾಗಿದೆ.

ಕೇರಳದಲ್ಲಿ ಒಟ್ಟು ೬೭ ಮಂದಿಗೆ ಅಮೀಬಿಕ್ ಮೆನಿಂಜೋಎನ್ಸೇಫಲಿಟೀಸ್ ಎಂಬ ಈ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ ೧೮ ಮಂದಿ ಬಲಿಯಾಗಿದ್ದಾರೆ.

ಈ ಸೋಂಕು ಸಾಂಕ್ರಾಮಿಕ ಅಲ್ಲದಿದ್ದರೂ, ಸೋಂಕಿಗೆ ಕಾರಣವಾಗಿರುವ ಅಮೀಬಾ ಸೂಕ್ಷಾö್ಮಣುಜೀವಿ ನೆಲೆಸಿರುವ ಶುದ್ಧವಿಲ್ಲದ ಈಜುಕೊಳ, ಕೆರೆಗಳಲ್ಲಿ ಜನರು ಈಜದೇ ಇರಲು ಅಲ್ಲಿನ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದೆ.