ವೀರಾಜಪೇಟೆ, ಸೆ. ೧೬: ಶರೀಅತ್‌ಗೆ ವಿರುದ್ಧವಾದ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್‌ನಿಂದ ಉಚ್ಚಾಟನೆ ಮಾಡಿ ಜಮಾಅತ್ ಆಡಳಿತ ಆದೇಶ ಹೊರಡಿಸಿದೆ.

ವೀರಾಜಪೇಟೆ ಮೈತಾಡಿ ಗ್ರಾಮದ ಬೊಳ್ಯಪಂಡ ಎಂ. ಭೀಮಯ್ಯ ಎಂಬವರ ಗರ್ಭ ಧರಿಸಿದ್ದ ಹಸುಗಳನ್ನು ಕಳ್ಳತನ ಮಾಡಿ ಮಾಂಸಕ್ಕಾಗಿ ಹತ್ಯೆ ಮಾಡಿ ಹಸುವಿನ ತ್ಯಾಜ್ಯ, ಅವಶೇಷಗಳನ್ನು ನದಿಯ ತಟದಲ್ಲಿ ಹಾಕಿ ತೆರಳಿದ್ದ ಘಟನೆಗೆ ಸಂಬAಧಿಸಿದAತೆ ಬಂಧಿತರಾಗಿರುವ ಕೊಂಡAಗೇರಿ ಗ್ರಾಮದ ನಿವಾಸಿಗಳಾದ ಎ.ಎ. ಶಾಹಿದ್, ಬಿ.ಎಂ. ಹ್ಯಾರಿಸ್ ಮತ್ತು ಕೆ.ಎ. ಆಶಿಕ್ ಇವರುಗಳ ಸದಸ್ಯತ್ವವನ್ನು ಕೊಂಡAಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾಅತ್ ರದ್ದುಗೊಳಿಸಿದೆ.