ಸರ್.ಎಂ. ವಿಶ್ವೇಶ್ವರಯ್ಯ ಅವರು ೧೮೬೦, ಸೆಪ್ಟೆಂಬರ್ ೧೫ ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಶಾಸ್ತಿç - ತಾಯಿ ವೆಂಕಟಲಕ್ಷಿö್ಮ. ಸರ್.ಎಂ.ವಿ. ಎಂದೇ ಪ್ರಖ್ಯಾತರಾದ ವಿಶ್ವೇಶ್ವರಯ್ಯ ಇವರ ಪೂರ್ವಿಕರು ಆಂಧ್ರದ ಕರ್ನೂಲ್ ಜಿಲ್ಲೆಯ ಮೋಕ್ಷಗುಂಡA ಎಂಬಲ್ಲಿAದ ಮುದ್ದೇನಹಳ್ಳಿಗೆ ಬಂದು ನೆಲೆಸಿದ್ದವರು. ಹಳ್ಳಿಯಲ್ಲೇ ಹುಟ್ಟಿ ಬೆಳೆದರೂ ಕಷ್ಟಗಳನ್ನು ಲೆಕ್ಕಿಸದೆ ಓದಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಇವರ ತಂದೆ ಸಂಸ್ಕೃತ ವಿದ್ವಾಂಸರು, ಆಯುರ್ವೇದ ತಜ್ಞರೂ ಆಗಿದ್ದರು. ಇವರು ಚಿಕ್ಕಂದಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದು ಮಹಾರಾಷ್ಟçದ ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿAಗ್ ಪದವಿ ಪಡೆದರು.

ಇವರು ಭಾರತದ ಅನೇಕ ಕಡೆ ಇಂಜಿನಿಯರಿAಗ್ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಸರಬರಾಜು ಯೋಜನೆಯನ್ನು ರೂಪಿಸಿ ಕಾರ್ಯಗತ ಮಾಡಿಕೊಳ್ಳಲು ನಾಸಿಕ್, ಬೆಳಗಾವಿ ಮೊದಲಾದ ಸ್ಥಳಗಳಲ್ಲಿ ಚರಂಡಿ ವ್ಯವಸ್ಥೆ, ನೀರು ಸರಬರಾಜು ಯೋಜನೆಯನ್ನು ರೂಪಿಸಿದರು. ೧೮೮೪ ರಲ್ಲಿ ಇವರು ಮುಂಬೈನಲ್ಲಿ ಪಿ.ಡಬ್ಲೂö್ಯ.ಡಿ. ಅಸಿಸ್ಟೆಂಟ್ ಆಗಿ ಉದ್ಯೋಗ ಪ್ರಾರಂಭಿಸಿದರು. ನಾಸಿಕ್ ಮತ್ತು ಪುಣೆಯಲ್ಲಿ ಕೆಲಸ ಮಾಡಿ ಸೂರತ್‌ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯ ರಾದರು. ಇವರು ಅತ್ಯಂತ ನಿಷ್ಠರೂ, ಪ್ರಾಮಾಣಿಕರು, ಧರ್ಮಶೀಲರೂ ಆಗಿದ್ದರು. ಇವರು ಉನ್ನತ ವಿದ್ಯಾಭ್ಯಾಸ ಕ್ಕೆಂದು ಲಂಡನ್‌ಗೆ ತೆರಳಿದ್ದಾಗ ಭಾರತ ಸರಕಾರ ಅವರನ್ನು ವಾಪಾಸ್ಸು ಕರೆಸಿಕೊಳ್ಳ ಲಾಯಿತು. ಪುಣೆಯ ಸಮೀಪ ಖಡಕವಾಸ್ಲ ಜಲಾಶಯಗಳಿಗೆ ಆಟೋಮ್ಯಾಟಿಕ್ ಸ್ವಯಂ ಚಾಲಿತ ಫೆಡ್‌ಗೇಟ್ ಅಳವಡಿಸಿದರು. ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರ್ ಆಗಿ ಆಯ್ಕೆಗೊಂಡು ಮೈಸೂರು ಸಂಸ್ಥಾನಕ್ಕೆ ದಿವಾನರಾದರು.

ಮೈಸೂರು ಸೋಪ್ ಫ್ಯಾಕ್ಟರಿ, ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಸ್ಟಿಟ್ಯೂಟ್, ಬೆಂಗಳೂರಿನ ಇಂಜಿನಿಯರಿAಗ್ ಕಾಲೇಜ್‌ನ ಸ್ಥಾಪನೆಗೆ ಕಾರಣಕರ್ತರಾದರು. ಇದು ವಿಶ್ವೇಶ್ವರಯ್ಯ ಇಂಜಿನಿಯರಿAಗ್ ಕಾಲೇಜು ಎಂದೇ ಹೆಸರಾಯಿತು. ಜೋಗ್ ಜಲ ವಿದ್ಯುತ್ ಸ್ಥಾವರ ಇವೆಲ್ಲವೂ ಇವರ ಸಾಧನೆಯ ಫಲ.

೧೯೫೫ ರಲ್ಲಿ ಭಾರತ ಸರಕಾರ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ಇವರು ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕಾರ್ಯ ಸಾಧನೆ ಮಾಡಿದರು.

ಇವರು ೧೦೧ ವರ್ಷ ಬದುಕಿ ಬಾಳಿದರು. ೯೦ ವರ್ಷದವರೆಗೂ ಇವರ ಕಣ್ಣಿನ ದೃಷ್ಟಿಯಲ್ಲಿ ಯಾವ ದೋಷವಿಲ್ಲದೆ ಆರೋಗ್ಯವಾಗಿದ್ದರು. ೧೯೬೨ ರ ಏಪ್ರಿಲ್ ೧೪ ರಂದು ನಿಧನರಾದರು. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಹೈದರಾಬಾದ್ ಉಸ್ಮಾನ್ ಸಾಗರ್, ಹಿಮಾಯತ್ ಸಾಗರ್ ಜಲಾಶಯಗಳಾದವು.

ಮುಖ್ಯ ಇಂಜಿನಿಯರಾಗಿ ೧೯೦೯ ರಲ್ಲಿ ೧೯೧೨ ರಲ್ಲಿ ಕೃಷ್ಣರಾಜಸಾಗರ ಅಣೆಕಟ್ಟನ್ನು ಕಟ್ಟಿಸಿದರು. ಇವರ ಗಣನೀಯ ಸೇವೆ, ಆದರ್ಶಗಳನ್ನು ಎಲ್ಲರೂ ನೆನಪಿಸಿಕೊಳ್ಳೋಣ.

ಇವರ ಸ್ಮರಣೆಗಾಗಿ ಪ್ರತಿವರ್ಷ ಸೆಪ್ಟೆಂಬರ್ ೧೫ ರಂದು ಇಂಜಿನಿಯರ್ ದಿನವೆಂದು ಆಚರಿಸಲಾಗುತ್ತಿದೆ.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ,

ಟಿ. ಶೆಟ್ಟಿಗೇರಿ.